×
Ad

ಅಫಜಲಪುರ | ಹೆಲ್ಪಿಂಗ್ ಹ್ಯಾಂಡ್ ವತಿಯಿಂದ ಆರೋಗ್ಯ ತಪಾಸಣಾ ಶಿಬಿರ

Update: 2025-07-18 11:35 IST

ಕಲಬುರಗಿ: ಅಫಜಲಪುರದ ಹೆಲ್ಪಿಂಗ್ ಹ್ಯಾಂಡ್ ಗ್ರೂಪ್ ವತಿಯಿಂದ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಯಿತು.

ಅಫಜಲಪುರ ಪಟ್ಟಣದ ಖುರೇಶಿ ಹಾಲ್ ನಲ್ಲಿ ನಡೆದ ಈ ಆರೋಗ್ಯ ಶಿಬಿರದಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯ ಅರುಣ್ ಕುಮಾರ್ ಎಂ.ವೈ.ಪಾಟೀಲ್ ಭಾಗವಹಿಸಿ ಮಾತನಾಡಿ, ಶಿಬಿರಾರ್ಥಿಗಳಿಗೆ ವಿವಿಧ ರೀತಿಯ ವೈದ್ಯಕೀಯ ಪರೀಕ್ಷೆಗಳನ್ನು ನಡೆಸುತ್ತಿರುವ ಬಗ್ಗೆ ಸಂತೋಷ ವ್ಯಕ್ತಪಡಿಸಿದರು.

ಈ ಶಿಬಿರದಲ್ಲಿ ಒಳಗೊಂಡ ಶಿಬಿರಾರ್ಥಿಗಳ ಚಿಕಿತ್ಸೆ ಪಡೆಯುವುದಕ್ಕಾಗಿ ಬೇಕಾಗುವ ಅಗತ್ಯ ಸೌಲಭ್ಯಗಳನ್ನು ಕುರಿತು ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿಗಳೊಂದಿಗೆ ಸಮಾಲೋಚನೆ ಮಾಡಲಾಗುವುದು ಎಂದು ಹೇಳಿದರು.

ಆರೋಗ್ಯ ಮೇಳದಲ್ಲಿ ಸುಮಾರು 35 ಜನರಿಗೆ ಕಬ್ಬಿನ ತರಪಿ ಮತ್ತು 160 ಜನರಿಗೆ ವಿವಿಧ ರೋಗಗಳ ಬಗ್ಗೆ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಯಿತು.

ಈ ಸಂದರ್ಭದಲ್ಲಿ ಹೆಲ್ಪಿಂಗ್ ಹ್ಯಾಂಡ್ ಗ್ರೂಪಿನ ಸಂಘಟಕರಾದ ಅಮೀರ್ ಸೋಲಾಪುರ್, ಹಿದಾಹಿತ ಸಾಹೇಬ್ ಶಹಜಹಾನ್ ಜಾಗಿರ್ದಾರ್, ಶಾಹಿದ್ ಶೇಖ್, ಮುನೀರ್ ಮುಜಾವರ್, ಆವೇಜ್ ಬಡೆಗರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News