×
Ad

ಕಲಬುರಗಿ | ಎಮ್.ಎನ್.ದೇಸಾಯಿ ಕಾಲೇಜಿನಲ್ಲಿ ಕೃತಕ ಬುದ್ಧಿಮತ್ತೆ (ಎಐ) ಕಾರ್ಯಾಗಾರ

Update: 2026-03-07 21:39 IST

ಕಲಬುರಗಿ : ನಗರದ ಎಮ್.ಎನ್.ದೇಸಾಯಿ ಪದವಿ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ 'ಕೃತಕ ಬುದ್ಧಿಮತ್ತೆ ಮತ್ತು ಭವಿಷ್ಯದ ತಂತ್ರಜ್ಞಾನ' ಎಂಬ ವಿಶೇಷ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಯತಿಕಾರ್ಪ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಸಂಸ್ಥಾಪಕ ಮತ್ತು ಸಿಇಒ ಯತೀಶ್ ಕೆ.ಎಸ್. ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದಿನ ಯುಗದಲ್ಲಿ ಎಐ ಕೇವಲ ಇಂಜಿನಿಯರ್‌ಗಳಿಗೆ ಸೀಮಿತವಾಗಿಲ್ಲ, ಎಲ್ಲರಿಗೂ ಸಂಬಂಧಿಸಿದ್ದಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಯತಿಕಾರ್ಪ್ ನ ನೂತನ ಎಐ ಕಾರ್ಡ್‌ ಅನ್ನು ಪರಿಚಯಿಸಲಾಯಿತು.

ಯಾವುದೇ ತಾಂತ್ರಿಕ ಹಿನ್ನೆಲೆ ಇಲ್ಲದ ಕಲಾ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಕೆಲವೇ ಗಂಟೆಗಳಲ್ಲಿ ತಮ್ಮದೇ ಆದ ಸ್ವಂತ ವೆಬ್‌ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್‌ಗಳನ್ನು ಯಶಸ್ವಿಯಾಗಿ ರೂಪಿಸಿ ಪ್ರದರ್ಶಿಸಿದರು. ಕೋಡಿಂಗ್ ಜ್ಞಾನವಿಲ್ಲದಿದ್ದರೂ (ಎಐ) ತಂತ್ರಜ್ಞಾನವನ್ನು ಬಳಸಿ ಹೇಗೆ ಸೃಜನಶೀಲವಾಗಿ ಬೆಳೆಯಬಹುದು ಎಂಬುದನ್ನು ವಿದ್ಯಾರ್ಥಿಗಳು ಸಾಬೀತುಪಡಿಸಿದರು.

ಕಾರ್ಯಕ್ರಮದಲ್ಲಿ ಯತಿಕಾರ್ಪ್ ನಿರ್ದೇಶಕರಾದ ಪ್ರಖ್ಯಾತ ರೈ, ಜನರಲ್ ಮ್ಯಾನೇಜರ್ ಕೃಪಾ ಕೆ., ಮತ್ತು ಜೆಸ್ಕಾಮ್‌ನ ಹಿರಿಯ ಕೌಶಲ್ಯ ತರಬೇತಿ ಸಂಯೋಜಕ ರವಿ ಸಂಗಶೆಟ್ಟಿ, ಕಾಲೇಜಿನ ಅಧ್ಯಕ್ಷರಾದ ಸಂದೀಪ್ ದೇಸಾಯಿ ಮತ್ತು ಜಗನ್ನಾಥ್ ನಾಗೂರ್, ಮಂಜುನಾಥ್ ಬನ್ನೂರ್, ನಾಗರಾಜ್ ಪಟ್ಟಣಕರ್, ಶಿವಶರಣಪ್ಪ ಪೂಜಾರಿ, ಅಮರ್ ಹಾಗರಗ, ದೇವೇಂದ್ರಪ್ಪ ಸಜ್ಜನ್, ರಾಧಿಕಾ ಗುತ್ತೇದಾರ್, ಶ್ರೀದೇವಿ ಹಿರೇಮಠ, ಗುರುಬಾಯಿ ವಾಡಿ, ಅಂಬಿಕಾ ಪಟನೆ, ಜ್ಯೋತಿ ಹಂಗರಗಿ, ರೇಷ್ಮಾ ರಾಥೋಡ್, ಜೈಶ್ರೀ ದೇಶಮುಖ್, ಶಿಲ್ಪ ಚೆಟ್ಟಿ, ಗೀತಾ ಇಂಗಿನ್, ಸಂತೋಷ್ ಲಸ್ಕರ್, ಕಾಶಿಬಾಯಿ ವಗ್ಗೆ ಹಾಗೂ ನೂರಾರು ವಿದ್ಯಾರ್ಥಿಗಳು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News