×
Ad

ಚಿತ್ತಾಪುರ | ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಸಂಸ್ಕಾರ ನೀಡಬೇಕು : ಪಾಟೀಲ್

Update: 2026-03-08 00:13 IST

ಚಿತ್ತಾಪುರ: ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವುದರ ಮೂಲಕ ಸಂಸ್ಕಾರ ನೀಡಬೇಕು ಎಂದು ಡಿವೈಎಸ್ಪಿ ಶಂಕರಗೌಡ ಪಾಟೀಲ್ ಹೇಳಿದರು.

ಪಟ್ಟಣದ ಹೊರವಲಯದ ಮಳಖೇಡ ರಸ್ತೆಯಲ್ಲಿರುವ ಜ್ಞಾನಗಂಗಾ ಶಿಕ್ಷಣ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿದ್ದ ಗ್ರೇಟ್ ಇಂಡಿಯಾ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಾಲೆಯಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಶಿಕ್ಷರರು ನೀಡುತ್ತಾರೆ. ಅದರ ಜೊತೆಗೆ ಮನೆಯಲ್ಲಿ ಪಾಲಕರಾದವರು ಕೂಡ ಮಕ್ಕಳಿಗೆ ಸಂಸ್ಕಾರವನ್ನು ಕಲಿಸುವುದು ಅಷ್ಟೇ ಮುಖ್ಯ ಎಂದರು.

ರಾಯಚೂರಿನ ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಉಪ ಕುಲಪತಿ ಡಾ.ಮಹಾಂತಗೌಡ ಪಾಟೀಲ್ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚಿನ ಒತ್ತು‌‌ ನೀಡಬೇಕು. ಗುರುಗಳು ಕಲಿಸಿದ ವಿದ್ಯೆಯನ್ನು ವಿದ್ಯಾರ್ಥಿಗಳು ಚಾಚು ತಪ್ಪದೇ ಕಲಿಯಬೇಕು ಎಂದರು.

ಗುಲ್ಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಮಲ್ಲಣ್ಣ ಮಡಿವಾಳ ಮಾತನಾಡಿದರು.ಇದೇ ವೆಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಉಪ-ನಿರ್ದೇಶಕ ಕಚೇರಿಯ ವಿ.ಎಂ.ಪತ್ತಾರ್, ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಶರಣಪ್ಪ ಬನ್ನಿಕಟ್ಟಿ, ಕರಬಸಪ್ಪ ಮಾಲಿ ಪಾಟೀಲ್, ನಿವೃತ ಮುಖ್ಯಗುರು ಯಶವಂತರಾವ್ ಬಿರಾದಾರ್, ಸಂಸ್ಥೆಯ ಸಂಸ್ಥಾಪಕ ವಿಜಯಕುಮಾರ ಹಂಚಿನಾಳ, ಅಧ್ಯಕ್ಷ ಪ್ರಕಾಶ ಹಂಚಿನಾಳ, ಸಂಸ್ಥೆ ಕಾರ್ಯದರ್ಶಿ ಪ್ರಶಾಂತ್ ಪಾಟೀಲ್, ಆಡಳಿತಾಧಿಕಾರಿ ಶೃತಿ ಪಾಟೀಲ್, ಮುಖ್ಯಗುರ ಗುರುರಾಜ ರಾವೂರ ವೇದಿಕೆಯಲ್ಲಿದ್ದರು.

ಕಾರ್ಯಮಕ್ರದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ರವಿಂದ್ರ ಸಜ್ಜನಶೇಟ್ಟಿ, ರಮೇಶ ಬಟಗೇರಿ, ಶಿವಮುದ್ರಪ್ಪ ಸಣ್ಣೂರಕರ, ಡಿ.ಕೆ.ಪಾಟೀಲ್, ಡಾ.ದಾವೂದ ಪಟೇಲ್, ರಾಜಶೇಖರ ತಿಮ್ಮನಾಯಕ್, ರಾಜಶೇಖರ ಬಳ್ಳಾ, ರವಿ ಅಬ್ಬಿಗೇರಿ, ವಿರಸಂಗಪ್ಪ ಸುಲೇಗಾಂವ, ಶೃತಿ ಡಿ. ಹೆಬ್ಬಾಳ, ಕಾವೇರಿ ದರಪುರ್ ಇದ್ದರು.

ಶಿಕ್ಷಕ ಜೋಸೇಫ್ ನಿರೂಪಿಸಿದರು. ನಾಗರತ್ನ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News