ಅಫಜಲಪುರ: ಜೀವನ ಜಾಗರಣ ಸೋಷಿಯಲ್ ವೆಲ್ಫೇರ್ ಸೊಸೈಟಿ ವತಿಯಿಂದ ತಾಲೂಕಿನ ಘತ್ತರಗಾ ಗ್ರಾಮದ ಶ್ರೀ ಭಾಗ್ಯವಂತಿ ದೇವಸ್ಥಾನದ ಆವರಣದಲ್ಲಿ ಸುಮಾರು 35 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಸಾಮೂಹಿಕ ಶೌಚಾಲಯವನ್ನು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಅರುಣಕುಮಾರ ಎಂ.ವೈ. ಪಾಟೀಲ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಿಸಲಾದ ಈ ಸಾಮೂಹಿಕ ಶೌಚಾಲಯವು ಗ್ರಾಮದಲ್ಲಿ ಸ್ವಚ್ಛತೆ ಕಾಪಾಡಲು ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ಪ್ರಕಾಶ ಜಮಾದಾರ, ಎಪಿಎಂಸಿ ಅಧ್ಯಕ್ಷ ಮಂಜುನಾಥ ಅಂಜುಟಗಿ, ಮುಖಂಡರಾದ ಮತೀನ್ ಪಟೇಲ್, ಶ್ರೀಶೈಲ ರಮಗಾ, ಅಪ್ಪಾರಾವ ಸಂಗಮಕರ, ಗಂಗಾಧರ ಕರಿಬಂಟನಾಳ, ಮನೋಹರ ಬಿಲ್ಲಾಡ, ಮಲ್ಲಯ್ಯಸ್ವಾಮಿ ಕರಿಬಂಟನಾಳ ಹಾಗೂ ಶಿವಕಾಂತ ಸಿಂಗೆ ಉಪಸ್ಥಿತರಿದ್ದರು.

ಭಾಗ್ಯವಂತಿ ದೇವಸ್ಥಾನ ಸಮಿತಿಯ ಸದಸ್ಯರಾದ ಬಾಗು ಅಮ್ಮಣಿ, ರಾಚಪ್ಪ ನೆಲೋಗಿ, ಲಕ್ಷ್ಮೀಕಾಂತ ಸಿಂಗೆ, ಸಿದ್ದಪ್ಪ ಗುಡೇದ, ಭಾಗಣ್ಣ ಮಾಂಗ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor