×
Ad

ಅಫಜಲಪುರ | ದಲಿತ ಸಂಘರ್ಷ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ

Update: 2026-01-31 20:16 IST

ಅಫಜಲಪುರ : ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ.ಕೆ. ಸ್ಥಾಪಿತ) ಅಫಜಲಪುರ ತಾಲೂಕು ಸಮಿತಿಯ ಸರ್ವ ಸದಸ್ಯರ ಸಭೆ ಹಾಗೂ ಪುನರ್‌ಚೇತನ ಸಭೆಯಲ್ಲಿ ಸಮಿತಿಯ ನೂತನ ತಾಲೂಕು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ ಹೆಣ್ಣೂರು ಶ್ರೀನಿವಾಸ್ ಅವರ ಆದೇಶದ ಮೇರೆಗೆ ಅಫಜಲಪುರ ತಾಲೂಕಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ದಲಿತ ಸಂಘರ್ಷ ಸಮಿತಿಯ ಹಿರಿಯ ಮುಖಂಡರಾದ ಭೀಮರಾಯ ಗೌರ ವಹಿಸಿದ್ದರು. ಜಿಲ್ಲಾ ಸಂಚಾಲಕರಾದ ಭೀಮಶಾ ಖನ್ನಾ ಹಾಗೂ ವಿಭಾಗೀಯ ಸಂಚಾಲಕರಾದ ಧರ್ಮಣ್ಣ ಕೋನೇಕರ್ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಸಭೆಯಲ್ಲಿ ಯಲ್ಲಾಲಿಂಗ ದೊಡ್ಡಮನಿ, ಮಡಿವಾಳಪ್ಪ ಮಲ್ಲಾಬಾದ್, ಭಾಗಣ್ಣ ಕೋಳುಕರ, ಅರುಣ್ ಇನಾಮಾದಾರ್, ರಾಣು ಮುದ್ದನಕರ್ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.

ಸಭೆಯಲ್ಲಿ ಅಫಜಲಪುರ ತಾಲೂಕು ಸಂಚಾಲಕರಾಗಿ ಬಸವರಾಜ್ ಬಿಲಕರ, ತಾಲೂಕು ಸಂಘಟನಾ ಸಂಚಾಲಕರಾಗಿ ಲಕ್ಷ್ಮಣ ನಡಿಗೇರಿ, ಪಾಂಡುರಂಗ ಬಿಲಕರ, ಲಕ್ಷ್ಮಣ ಭೀಮಶಾ ತೇಲ್ಕರ್, ಅಶೋಕ್ ಲಕ್ಷ್ಮಣ ದೊಡ್ಡಮನಿ, ಪ್ರಕಾಶ್ ತೋಲಣ, ದತ್ತು ಬಂಕಲಗಿ ಹಾಗೂ ರವಿ ಛಲವಾದಿ ಅವರನ್ನು ಆಯ್ಕೆ ಮಾಡಲಾಯಿತು.

ಅದೇ ರೀತಿ ಮಲ್ಲಾಬಾದ್ ಗ್ರಾಮ ಶಾಖೆಯ ಸಂಚಾಲಕರಾಗಿ ಸಾಗರ್ ಬಾಗಪ್ಪ ಮೇಕೆರಿ, ಸಂಘಟನಾ ಸಂಚಾಲಕರಾಗಿ ಯಲ್ಲಾಲಿಂಗ ಖಾಜಪ್ಪ ಕಟ್ಟಿಮನಿ, ಲೋಕೇಶ್, ದೇವೇಂದ್ರ, ಅಭಿಷೇಕ, ವಿಶಾಲ್ ಕಟ್ಟಿಮನಿ, ಯಲ್ಲಾಲಿಂಗ ಬಾಲಚಂದ್ರ, ಹುಚ್ಚಪ್ಪ ಖಾಜಪ್ಪ ಯಳಸಂಗಿ ಅವರನ್ನು ನೇಮಕ ಮಾಡಲಾಯಿತು.

ನಿಲೂರು ಗ್ರಾಮ ಶಾಖೆಯ ಸಂಚಾಲಕರಾಗಿ ಸಂಗಮನಾಥ ವಿ. ಬಿಲಕರ ಹಾಗೂ ಸಂಘಟನಾ ಸಂಚಾಲಕರಾಗಿ ಪ್ರಭುಲಿಂಗ ಎಸ್. ಬಿ. ಅವರನ್ನು ಆಯ್ಕೆ ಮಾಡಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News