ಅಫಜಲಪುರ | ತಾಲೂಕು ಕಸಾಪದ ಹಂಗಾಮಿ ಅಧ್ಯಕ್ಷರಾಗಿ ಪ್ರಭಾವತಿ ನೇಮಕ
Update: 2026-01-02 18:59 IST
ಅಫಜಲಪುರ: ತಾಲೂಕು ಕಸಾಪ ಅಧ್ಯಕ್ಷರಾಗಿದ್ದ ಪ್ರಭು ಪುಲಾರಿ ಕಾರಣಾಂತರಗಳಿಂದ ರಾಜೀನಾಮೆ ಸಲ್ಲಿಸಿದರಿಂದ ನೂತನ ಹಂಗಾಮಿ ಅಧ್ಯಕ್ಷರಾಗಿ ಅಫಜಲಪುರ ಪಟ್ಟಣದ ಆಶಾಕಿರಣ ಸೇವಾ ಸಂಸ್ಥೆ ಅಧ್ಯಕ್ಷೆ ಪ್ರಭಾವತಿ ಎಸ್.ಮೇತ್ರಿ ಅವರನ್ನು ನೇಮಕ ಮಾಡಲಾಗಿದೆ.
ಹಾಲಿ ಅಧ್ಯಕ್ಷ ಪ್ರಭು ಪುಲಾರಿ ಅವರು ತಮ್ಮ ರಾಜೀನಾಮೆ ಪತ್ರವನ್ನು ಕಸಾಪ ಜಿಲ್ಲಾಧ್ಯಕ್ಷರಾದ ವಿಜಯಕುಮಾರ ತೇಗಲತಿಪ್ಪಿ ಅವರಿಗೆ ಸಲ್ಲಿಸಿದ ನಂತರ ಹಂಗಾಮಿ ಅಧ್ಯಕ್ಷರನ್ನಾಗಿ ಪ್ರಭಾವತಿ ಅವರನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ.