×
Ad

ಅಫಜಲಪುರ | ಸಿಜೆಐ ಬಿ.ಆರ್.ಗವಾಯಿ ಮೇಲೆ ಶೂ ಎಸೆತ ಪ್ರಕರಣ : ದೇಶದ್ರೋಹ ಪ್ರಕರಣ ದಾಖಲಿಸುವಂತೆ ಆಗ್ರಹ

Update: 2025-10-07 17:21 IST

ಕಲಬುರಗಿ: ಸುಪ್ರೀಂಕೋರ್ಟ್ ನ್ಯಾಯಾಧೀಶ ಬಿ. ಆರ್. ಗವಾಯಿ ಅವರತ್ತ ಶೂ ಎಸೆದ ವ್ಯಕ್ತಿಯ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸುವಂತೆ ಅಫಜಲಪುರ ತಾಲೂಕಿನ ವಿವಿಧ ಜನಪರ ಸಂಘಟನೆಗಳು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದೆ.

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ)ಯ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಶೂ ಎಸೆದ ವ್ಯಕ್ತಿಯ ವಿರುದ್ಧ ದೇಶದ್ರೋಹದ ಪ್ರಕರಣವನ್ನು ದಾಖಲಿಸಿ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಲಾಯಿತು.

ಈ ಪ್ರಕರಣದಲ್ಲಿ ಭಾಗಿಯಾದ ವ್ಯಕ್ತಿ ವಕೀಲನಾಗಿದ್ದು, ಎಲ್ಲ ರೀತಿಯ ಕಾನೂನು ಪ್ರಜ್ಞೆ ಉಳ್ಳವನಾಗಿದ್ದಾನೆ. ದೇಶದ ದಲಿತ ಮತ್ತು ಕೆಳವರ್ಗದ ಜನ ಉನ್ನತ ಹುದ್ದೆಯಲ್ಲಿ ಇರುವುದನ್ನು ನೋಡಲು ಸಹಿಸಲಾಗದವರ ಕೃತ್ಯ ಇದಾಗಿದೆ ಎಂದು ಪ್ರತಿಭಟನಾಕಾರರು ಖಂಡಿಸಿದ್ದಾರೆ.

ಪ್ರತಿಭಟನೆ ವೇಳೆ ಭಗವಂತ ವಗ್ಗೆ ಮಾತನಾಡಿದರು.

ಈ ಸಂದರ್ಭದಲ್ಲಿ ಅರವಿಂದ ದೊಡ್ಡಮನಿ, ಬೀರಣ್ಣ ಪೂಜಾರಿ, ರವಿ ಗೌರ, ಭಗವಂತ ವಗ್ಗೆ, ದತ್ತಾತ್ರೇಯ ಹರಿಜನ, ದವಲಪ್ಪ ಹೊಸಮನೆ, ಪ್ರಕಾಶ ಬನಸೋಡೆ, ಸಂತೋಷ ದೊಡ್ಡಮನಿ, ಯಶವಂತ ಮಣ್ಣೂರ್, ಮಡಿವಾಳ ದೊಡ್ಡಮನಿ, ಕುಪೇಂದ್ರ ಸಿಂಗೇ, ಪ್ರಶಾಂತ ಮ್ಯಾಕೇರಿ, ರಾಹುಲ್ ಅಣ್ಣೇನವರ್, ಶರಣಪ್ಪ ಬಳುರ್ಗಿ, ಮರೆಪ್ಪ ಎಚ್. ಪ್ರಮೋದ್ ಗಾಡಿ ವಡ್ಡರ, ಮಾರುತಿ ಗಾಡಿ ವಡ್ಡರ, ದಲಿತ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷರಾದ ಮಹಾಂತೇಶ ಬಡದಾಳ, ಹಫೀಝ್‌ ಕುರ್ರೇಶಿ, ರಾಜು ಶೇಖ, ಗುಲಾಬ್ ಶೇಕ್, ಅರಬಾಜ ಸೇರಿದಂತೆ ಮತ್ತಿತರರು ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News