ಆಳಂದ | ಕೊರಳ್ಳಿ ಕ್ಲಸ್ಟರ್ ನ 11 ಶಾಲೆಗಳಿಗಿಲ್ಲ ಎಣ್ಣೆ, ಹಾಲಿನ ಪ್ಯಾಕೆಟ್
ಕಲಬುರಗಿ: ಅಕ್ಷರ ದಾಸೋಹ ಯೋಜನೆಯಡಿಯಲ್ಲಿ ಬಿಸಿಯೂಟದ ಭಾಗವಾಗಿ ನೀಡಬೇಕಾದ ಎಣ್ಣೆ ಪ್ಯಾಕೆಟ್ ಹಾಗೂ ಹಾಲಿನ ಪುಡಿ ಪೂರೈಕೆ ಕೊರಳ್ಳಿ ಕ್ಲಸ್ಟರ್‌ನ ಹಲವಾರು ಸರ್ಕಾರಿ ಶಾಲೆಗಳಲ್ಲಿ ಒಂದು ತಿಂಗಳಾದರೂ ನೀಡಿಲ್ಲ. ಈ ಕುರಿತು ಆಳಂದ ತಾಲ್ಲೂಕಿನ ಕೊರಳ್ಳಿ ವಲಯ ಸಿಆರ್‌ಪಿ ಅವರು ತಕ್ಷಣದ ಕ್ರಮಕ್ಕೆ ಮನವಿ ಮಾಡಿದ್ದಾರೆ.
ಎಣ್ಣೆ ಪೂರೈಕೆ ಆಗಿಲ್ಲದ ಶಾಲೆ: ಕೋರಳ್ಳಿ ವಲಯದ ಮಟಕಿ ತಾಂಡಾ (ಸ.ಹಿ.ಪ್ರಾ.ಶಾ), ಸಂಗೋಳಗಿ ಜಿ2 (ಸ.ಹಿ.ಪ್ರಾ.ಶಾ), ಬಿಜಿಲಿ ಗುಂಡ ತಾಂಡಾ, ಶಾಮೂ ನಾಯಕ ತಾಂಡಾ, ಆಪ್ಟೆ ತಾಂಡಾ, ಮೋರಿ ಸಾಬ್ ತಾಂಡಾ, ಸೀಡ್ಸ್ ಫಾರ್ಮ್ ತಾಂಡಾ, ಕೊರಳ್ಳಿ ಹೊಸ ಬಡಾವಣೆ, ಸಂಗೋಳಗಿ ತಾಂಡಾ ಕೆರೆ ವಸಾಹತು ನೆಹರೂನಗರ ತಾಂಡಾ ಬಿಸಿಯೂಟಕ್ಕೆ ಎಣ್ಣೆ ಪೂರೈಕೆಯಿಲ್ಲದೆ ಅಡುಗೆ ತಯಾರಿಕೆ ಸಮಸ್ಯೆ ಎದುರಾಗಿದೆ ಎಂದು ಅಕ್ಷರ ದಾಸೋಹದ ಯೋಜನಾ ಸಹಾಯಕ ನಿರ್ದೇಶಕರಿಗೆ ಒತ್ತಾಯಿಸಿದ್ದಾರೆ.
ಅಲ್ಲದೆ, ಹಾಲಿನ ಪುಡಿ ಪೂರೈಕೆ ಆಗಿಲ್ಲದ ಮಟಕಿ ತಾಂಡಾ, ಬಿಜಿಲಿ ಗುಂಡ ತಾಂಡಾ, ಶಾಮೂ ನಾಯಕ ತಾಂಡಾ, ಆಪ್ಟೆ ತಾಂಡಾ, ನೆಹರುನಗರ ತಾಂಡಾ, ಸಂಗೋಳಗಿ ಜಿ2, ಮೋರಿ ಸಾಬ್ ತಾಂಡಾ, ಕೊರಳ್ಳಿ ಹೊಸ ಬಡಾವಣೆ, ಸಂಗೋಳಗಿ ತಾಂಡಾ ಈ ಎಲ್ಲಾ ಶಾಲೆಗಳಿಗೂ ತಕ್ಷಣ ಎಣ್ಣೆ ಪಾಕೀಟ್ ಮತ್ತು ಹಾಲಿನ ಪುಡಿಯನ್ನು ಸರಬರಾಜು ಮಾಡುವಂತೆ ಸಿಆರ್‌ಪಿ ಕೊರಳ್ಳಿ ಅವರು ಇಲಾಖೆಯ ಸಹಾಯಕ ನಿರ್ದೇಶಕರಿಗೆ ಮನವಿ ಸಲ್ಲಿಸಿದ್ದಾರೆ. ಒಂದು ತಿಂಗಳಿಗಿoತ ಹೆಚ್ಚು ಸಮಯವಾದರೂ ಪೂರೈಕೆ ಆಗದಿರುವುದು ಮಕ್ಕಳ ಪೋಷಣಾ ಹಕ್ಕಿಗೆ ಧಕ್ಕೆಯಾಗುತ್ತಿದೆ ಎಂಬುದು ಅಭಿಪ್ರಾಯವಾಗಿದೆ.
ಪೂರೈಕೆ ವಿಳಂಬವಾಗಿದ್ದು ನಿಜ:
ಮೇಲಿನಿಂದಲೇ ಎಣ್ಣೆ ಪೂರೈಕೆಯಿಲ್ಲದೆ ವಿಳಂಬವಾಗಿದ್ದರಿಂದ ಜೂನ್ ತಿಂಗಳಲ್ಲಿ ಕೆಲವು ಶಾಳೆಗಳಿಗೆ ಎಣ್ಣೆ ಹಾಲಿನ ಪುಡಿ ಪೂರೈಕೆಯಾಗಿಲ್ಲ. ಜೂನ್ 26ಕ್ಕೆ ಎಣ್ಣೆ ಬಂದಿದ್ದು, ಎಲ್ಲಡೆ ಪೂರೈಕೆ ಮಾಡಲಾಗುತ್ತಿದೆ. ಗೋದಾಮಿನಿಂದಲೇ ಮಂಗಳವಾರವೂ ಸಹಿತ ಪೂರೈಕೆ ವಾಹನ ಕಳುಹಿಸಿಕೊಡಲಾಗಿದೆ. ಎಲ್ಲಾ ಶಾಲೆಗಳಿಗೆ ಆಹಾರ ಸಾಮಗ್ರಿ ಪೂರೈಕೆಯಾದ ಬಗ್ಗೆ ಖುದ್ದಾಗಿ ಭೇಟಿ ನೀಡಿ, ಅಡುಗೆಯ ಗುಣಮಟ್ಟವನ್ನು ಸಹ ಪರಿಶೀಲಿಸಲಾಗುತ್ತಿದೆ. ಶಾಲಾ ಬಿಸಿಯೂಟ ತಯಾರಿಕೆಗೆ ಕೊರತೆಯಾಗದಂತೆ ಮುಂಜಾಗೃತ ಕ್ರಮವಾಗಿ ಪತ್ರ ಬರೆದು ಆಹಾರ ದಾಸ್ತಾನಿಗೆ ಕ್ರಮವಹಿಸಲಾಗುತ್ತಿದೆ.
-ಬಿ.ಎಚ್. ಸೂರ್ಯವಂಶಿ (ಸಹಾಯಕ ನಿರ್ದೇಶಕರು ಅಕ್ಷರ ದಾಸೋಹ ಯೋಜನೆ ತಾಪಂ ಆಳಂದ)