ಆಳಂದ | ಕಾರ್ಮೆಲ್ ಜ್ಯೋತಿ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕ್ಷಯರೋಗಿಗಳಿಗೆ ಪ್ರೋಟಿನ್ ಆಹಾರ ವಿತರಣೆ
Update: 2025-07-15 22:54 IST
ಕಲಬುರಗಿ: ಆಳಂದ ತಾಲೂಕಿನ ಕಡಗಂಚಿ ಬಳಿಯ ಕಾರ್ಮೆಲ್ ಜ್ಯೋತಿ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ನ ಆಶ್ರಯದಲ್ಲಿ ತಾಲೂಕಿನ 19 ಕ್ಷಯರೋಗಿಗಳಿಗೆ ಪ್ರೋಟಿನ್ ಆಹಾರ ವಿತಸಲಾಯಿತು.
ಈ ಕಾರ್ಯಕ್ರಮದಲ್ಲಿ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಸುಶೀಲ್, ತಾಲೂಕು ಕ್ಷಯರೋಗಾಧಿಕಾರಿ ವಿಶಾಲ್, ಸನ್ನಿಧಿ ಸುಪೀರಿಯರ್ ಫಾ.ದೀಪಕ್ ಥೋಮಸ್ ಹಾಗೂ ಟ್ರಸ್ಟ್ ನ ಕಾರ್ಯದರ್ಶಿ ಫಾ.ವಿಲಿಯಂ ಮಿರಾಂಡಾ ಉಪಸ್ಥಿತರಿದ್ದರು.
ಆರೋಗ್ಯಾಧಿಕಾರಿ ಡಾ.ಸುಶೀಲ್‍ಕುಮಾರ ಅಂಬುರೆ ಅವರು ಮಾತನಾಡಿ, ಕ್ಷಯರೋಗದ ಬಗ್ಗೆ ಜಾಗೃತಿ ಮೂಡಿಸುವ ಮಾತುಗಳನ್ನು ಆಡಿದರು. "ಸಮಯಕ್ಕೆ ಸರಿಯಾದ ಚಿಕಿತ್ಸೆ ಮತ್ತು ಪೌಷ್ಟಿಕ ಆಹಾರವೇ ಕ್ಷಯರೋಗವನ್ನು ಜಯಿಸುವ ಪ್ರಮುಖ ಅಸ್ತ್ರಗಳು" ಎಂದು ಒತ್ತಿ ಹೇಳಿದರು.
ಕಾರ್ಮೆಲ್ ಜ್ಯೋತಿ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ನ ಈ ಕಾರ್ಯಕ್ರಮವು ಕ್ಷಯರೋಗಿಗಳಿಗೆ ಆರೋಗ್ಯದ ಜೊತೆಗೆ ಭರವಸೆಯನ್ನು ಒದಗಿಸುವಲ್ಲಿ ಯಶಸ್ವಿಯಾಗಿದೆ.