×
Ad

ಆಳಂದ| ಧಾರಾಕಾರ ಮಳೆಯಿಂದ ಬೆಳೆ, ಸೇತುವೆ ಹಾನಿ : ಪರಿಹಾರಕ್ಕೆ ಅಧಿಕಾರಿಗಳಿಗೆ ಶಾಸಕ ಬಿ.ಆರ್ ಪಾಟೀಲ್ ಸೂಚನೆ

Update: 2025-09-14 19:23 IST

ಕಲಬುರಗಿ: ಭಾರೀ ಮಳೆಯಿಂದಾಗಿ ಆಳಂದ ತಾಲ್ಲೂಕಿನ ಹಲವು ಹಳ್ಳಿಗಳಲ್ಲಿ ಬೆಳೆ ನಷ್ಟವಾಗಿದ್ದು, ಕೆಲವು ಕಡೆಗಳಲ್ಲಿ ಸೇತುವೆಗಳಿಗೆ ಹಾನಿಯಾಗಿದೆ. ಕೂಡಲೇ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಶಾಸಕರೂ ಆಗಿರುವ ನೀತಿ ಆಯೋಗದ ರಾಜ್ಯ ಉಪಾಧ್ಯಕ್ಷ ಬಿ.ಆರ್.ಪಾಟೀಲ್ ಅವರು ಸೂಚಿಸಿದರು.

ಆಳಂದ ತಾಲ್ಲೂಕಿನ ಚುಂಚೋಳಿ (ಕೆ), ಚಿಂಚೋಳಿ (ಬಿ) ರಸ್ತೆ, ಪಡಸಾವಳಿ ಖಾನಾಪುರ್, ಜಿರೋಳಿ, ನಿರ್ಗುಡಿ, ಮಟಕಿ ಸೇರಿದಂತೆ ಹಲವು ಗ್ರಾಮಗಳು ಪ್ರವಾಹ ಪೇಷಲ್ಕಿ ಬೆಳೆಯ ರಸ್ತೆ ಸೇತುವೆ ಸಂಪೂರ್ಣ ಕೊಚ್ಚಿಹೋಗಿದ್ದು, ಹಳ್ಳಿಗಳ ನಡುವಿನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಮಳೆಯಿಂದಾಗಿ ಕಬ್ಬು, ತೊಗರಿ, ಸೇರಿದಂತೆ ಇತರೆ ಬೆಳೆಗಳು ನಷ್ಟಕ್ಕೀಡಾಗಿವೆ. ಕೂಡಲೇ ಪರಿಹಾರ ನೀಡಬೇಕೆಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ತಹಶೀಲ್ದಾರ್ ಅಣ್ಣಾರಾವ್ ಪಾಟೀಲ್, ತಾಲೂಕು ಪಂಚಾಯತ್‌ ಕಾರ್ಯನಿರ್ವಾಹಕ ಅಧಿಕಾರಿ ಮಾನಪ್ಪ ಕಟ್ಟಿಮನಿ, ಜಿಲ್ಲಾ ಪಂಚಾಯತ್‌ ಎಇಇ ಸಂಗಮೇಶ್ ಬಿರಾದಾರ್, ಸಹಾಯಕ ಕೃಷಿ ನಿರ್ದೇಶಕ ಬನಿಸಿದ್ ಬಿರಾದಾರ್, ಪಶು ಸಂಗೋಪನೆ ಸಹಾಯಕ ನಿರ್ದೇಶಕ ಡಾ.ಎಲ್ಲಪ್ಪ ಇಂಗಳೇ, ಸಿಪಿಐ ಪ್ರಕಾಶ್ ಯಾತನೂರ್, ಜೆಸ್ಕಾಂ ಮತ್ತು ಪಿಡಬ್ಲ್ಯೂಡಿ ಅಧಿಕಾರಿಗಳು ಶಾಸಕರ ಜೊತೆಗಿದ್ದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News