ಆಳಂದ ಸಹಕಾರಿ ಸಕ್ಕರೆ ಕಾರ್ಖಾನೆಗೆ 3ನೇ ಬಾರಿಗೆ ಅಧ್ಯಕ್ಷರಾಗಿ ಗುರುಲಿಂಗ ಜಂಗಮ ಪಾಟೀಲ್ ಆಯ್ಕೆ
Update: 2025-12-30 18:06 IST
ಆಳಂದ : ತಾಲೂಕಿನ ಭೂಸನೂರ ಗ್ರಾಮದ ಆಳಂದ ಸಹಕಾರಿ ಸಕ್ಕರೆ ಕಾರ್ಖಾನೆಗೆ ನಡೆದ ಚುನಾವಣೆಯಲ್ಲಿ ಧಂಗಾಪೂರ ಗ್ರಾಮದ ಗುರುಲಿಂಗ ಜಂಗಮ ಎಸ್.ಪಾಟೀಲ್ ಅವರು ಸತತ ಮೂರನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆ ಆಗುವ ಮೂಲಕ ಹ್ಯಾಟ್ರಿಕ್ ಬಾರಿಸಿದ್ದಾರೆ.
ಈ ಕಾರ್ಖಾನೆಗೆ ಶಾಸಕ ಬಿ.ಆರ್.ಪಾಟೀಲ್ ಸರಸಂಬಾ ಇವರು 1984 ರಿಂದ 1989, ಮಾಜಿ ಶಾಸಕ ದಿ.ಶರಣಬಸಪ್ಪ ಮಾಲಿ ಪಾಟೀಲ್ ಧಂಗಾಪೂರ ಇವರು 1991 ರಿಂದ 1994, ಮಾಜಿ ಶಾಸಕ ಸುಭಾಷ ಗುತ್ತೇದಾರ ತಡಕಲ್ ಇವರು 1995 ರಿಂದ 1999, ಮಲ್ಲಿನಾಥ ಪಾಟೀಲ್ ಸೊಂತ ಇವರು 2000 ರಿಂದ 2002 , ಮಕಬೂಲ ಪಟೇಲ್ ಅವರು 20002 ರಿಂದ 2003 ರ ವರೆಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರೆ ಧಂಗಾಪೂರದ ಗುರುಲಿಂಗ ಜಂಗಮ ಎಸ್.ಪಾಟೀಲ್ ಅವರು 2015 ರಿಂದ ಅಧ್ಯಕ್ಷರಾಗಿ 2 ಅವಧಿ ಪೂರೈಸಿ ಮತ್ತೆ ಅಧ್ಯಕ್ಷ ಗಾದಿಗೆ ಆಯ್ಕೆ ಆಗುವ ಮೂಲಕ ಹ್ಯಾಟ್ರಿಕ ಬಾರಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.