×
Ad

ಆಳಂದ | ಯಶಸ್ಸು ಗಳಿಸಲು ಕಠಿಣ ಪರಿಶ್ರಮ ಮುಖ್ಯ: ಪ್ರೊ.ರಮೇಶ ಲಂಡನಕರ್

ವಿದ್ಯಾರ್ಥಿಗಳ ಬೀಳ್ಕೊಡುಗೆ–ಸ್ವಾಗತ ಸಮಾರಂಭ

Update: 2025-09-18 19:10 IST

ಕಲಬುರಗಿ: ಯಶಸ್ಸು ಸಾಧಿಸಲು ಕಠಿಣ ಪರಿಶ್ರಮ ಮತ್ತು ಸಮಯಪ್ರಜ್ಞೆ ಅತ್ಯಂತ ಮುಖ್ಯ. ಕಾಲೇಜಿನ ಸೌಲಭ್ಯಗಳನ್ನು ಸರಿಯಾಗಿ ಬಳಸಿಕೊಂಡರೆ ಜೀವನದಲ್ಲಿ ಉನ್ನತ ಮಟ್ಟ ತಲುಪಬಹುದು ಎಂದು ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಸಚಿವ (ಆಡಳಿತ) ಪ್ರೊ. ರಮೇಶ ಲಂಡನಕರ್ ಹೇಳಿದರು.

ಗುರುವಾರ ಆಳಂದ ಪಟ್ಟಣದ ಎಸ್‌ಆರ್‌ಜಿ ಫೌಂಡೇಶನ್‌ನ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೆಂಕಯ್ಯ ಕೂಸಯ್ಯ ಗುತ್ತೇದಾರ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಕಾಲೇಜಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

“ಜೀವನದಲ್ಲಿ ಪ್ರಶ್ನಿಸುವ ಮನೋಭಾವ ಬೆಳೆಸಿಕೊಂಡರೆ ಜ್ಞಾನ ವೃದ್ಧಿಯಾಗುತ್ತದೆ. ತಾಳ್ಮೆ, ಆಳವಾದ ವಿಶ್ಲೇಷಣೆ ಮತ್ತು ವಿಚಾರಶೀಲತೆ ವಿದ್ಯಾರ್ಥಿಗಳನ್ನು ಮುಂದಕ್ಕೆ ಕೊಂಡೊಯ್ಯುತ್ತದೆ. ಶಿಕ್ಷಣವನ್ನು ಕೇವಲ ಹಣದ ಪೈಪೋಟಿಯ ದೃಷ್ಟಿಯಿಂದಲೇ ನೋಡುವುದು ಸರಿಯಲ್ಲ. ಪಾಲಕರ ಗೌರವ, ಉಪನ್ಯಾಸಕರ ಶ್ರಮಕ್ಕೆ ಬೆಲೆ ಕೊಡಬೇಕು” ಎಂದು ಅವರು ತಿಳಿಸಿದರು.

ಮಾಜಿ ಶಾಸಕ ಹಾಗೂ ಸಂಸ್ಥೆಯ ಅಧ್ಯಕ್ಷ ಸುಭಾಷ ಆರ್. ಗುತ್ತೇದಾರ ಮಾತನಾಡಿ, “ಶಿಕ್ಷಣ ಸಂಸ್ಥೆಗಳು ಸಂಸ್ಕೃತಿ, ಸಂಸ್ಕಾರ ಮತ್ತು ಕೌಶಲ್ಯಗಳನ್ನು ಬೆಳೆಸುವ ಮೂಲಕ ದೇಶ ನಿರ್ಮಾಣದಲ್ಲಿ ಪಾತ್ರವಹಿಸಬೇಕು. ವಿದ್ಯಾರ್ಥಿಗಳು ಪಡೆದ ಪದವಿಗೆ ಮೆರಗು ಸಿಗಬೇಕಾದರೆ ಶಿಕ್ಷಣದೊಂದಿಗೆ ಸಮಾಜಮುಖಿ ಚಿಂತನೆ ಅಗತ್ಯ” ಎಂದು ಹೇಳಿದರು.

ಪ್ರೊ.ರಮೇಶ ರಾಠೋಡ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿ, “ಜ್ಞಾನ ಸಂಪಾದನೆ ವ್ಯಕ್ತಿತ್ವ ವಿಕಾಸಕ್ಕೆ ದಾರಿ. ಇತರರ ಬದುಕು, ಬವಣೆಗೆ ಸ್ಪಂದಿಸುವ ಮನೋಭಾವ ಬೆಳೆಸಿಕೊಳ್ಳಬೇಕು” ಎಂದು ಕರೆ ನೀಡಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಡಾ.ಅಪ್ಪಾಸಾಬ ಬಿರಾದಾರ, ಡಾ.ಅಶೋಕರೆಡ್ಡಿ, ಶಿವಶಂಕರ, ವಿದ್ಯಾರ್ಥಿ ಪ್ರತಿನಿಧಿ ವಾಣಿ ದೀಕ್ಷಿತ ಉಪಸ್ಥಿತರಿದ್ದರು.

ಉಪನ್ಯಾಸಕಿ ದಾನಮ್ಮ ಸ್ವಾಗತಿಸಿದರು. ಪ್ರಿಯಾಂಕಾ ರಾಠೋಡ ವಂದಿಸಿದರು. ಪ್ರಕಾಶ ತಾವರಗೇರಾ ನಿರೂಪಣೆ ಮಾಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News