×
Ad

ಆಳಂದ | ಕಿಣ್ಣಿಸುಲ್ತಾನ ಗ್ರಾಪಂ ಉಪಾಧ್ಯಕ್ಷರಾಗಿ ಮಥುರಾಬಾಯಿ ಅವಿರೋಧ ಆಯ್ಕೆ

Update: 2025-06-27 20:57 IST

ಕಲಬುರಗಿ: ಆಳಂದ ತಾಲೂಕಿನ ಕಿಣ್ಣಿಸುಲ್ತಾನ ಗ್ರಾಮ ಪಂಚಾಯತ್‌ ಉಪಾಧ್ಯಕ್ಷ ಎಸ್ಸಿ ಮೀಸಲು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಿಣ್ಣಿಸುಲ್ತಾನ ತಾಂಡಾದ ಬಿಜೆಪಿ ಬೆಂಬಲಿತ ಸದಸ್ಯೆ ಮಥುರಾಬಾಯಿ ಸುಭಾಷ ಚವ್ಹಾಣ ಅವರು ಶುಕ್ರವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ತಹಶೀಲ್ದಾರ್‌ ಅಣ್ಣಾರಾವ್ ಪಾಟೀಲ ಅವರು ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟರು. ಉಪಾಧ್ಯಕ್ಷ ಸ್ಥಾನಕ್ಕೆ ಸದಸ್ಯೆ ಮಥುರಾಬಾಯಿ ಚವ್ಹಾಣ ಅವರ ಹೊರತುಪಡಿಸಿ ಯಾರೊಬ್ಬರ ನಾಮಪತ್ರ ಸಲ್ಲಿಕೆ ಮಾಡಿರುವುದರಿಂದ ಮಥುರಾಬಾಯಿ ಅವರನ್ನು ಅವಿರೋಧವನ್ನಾಗಿ ಚುನಾವಣಾಧಿಕಾರಿಗಳು ಘೋಷಿಸಿದರು. ಪಿಡಿಓ ರಮೇಶ ಪ್ಯಾಟಿ, ಗ್ರಾಮ ಆಡಳಿತಾಧಿಕಾರಿ ದತ್ತಾ ರಾಠೋಡ, ಕಂದಾಯ ನಿರೀಕ್ಷಿಕ ಅಲ್ಲಾವೋದ್ದೀನ ಶೇಖ ಚುನಾವಣೆ ಪ್ರಕ್ರಿಯೆಗೆ ಸಹಕರಿಸಿದರು.

ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷೆ ನಾಗಮ್ಮ ಮೂಲಗೆ, ಸದಸ್ಯ ಕೃಷ್ಣಾ ಕಾಂಬಳೆ, ಸುರೇಶ ಕದರಗೆ, ಕುಪ್ಪಣ್ಣಾ ವಡಗಾಂವ, ಶಾಂತು ಶಹಾಪೂರೆ, ಶಿವರಾಯ ಪೂಜಾರಿ, ಲಲಿತಾ ಮೋದೆ, ಆಶಾ ಧೂಳೆ, ಶಿವುಪುತ್ರ ಪೂಜಾರಿ, ಶರಣು ಕುಂಬಾರ ಸೇರಿದಂತೆ ಗ್ರಾಮದ ಮುಖಂಡ ಪಂಡಿತರಾವ್ ಪಾಟೀಲ, ರಾಜು ಪಾಟೀಲ, ಬಸವರಾಜ ಕೇರೂರ, ನಾಗೇಂದ್ರ ಚನ್ನಶಟ್ಟಿ, ಕಲ್ಯಾಣಿ ಶೃಂಗೇರಿ, ನಿತೀನ ಚವ್ಹಾಣ, ಗುತ್ತಿಗೆದಾರ ಮಹಾದೇವ ಲಕುಕಳ್ಳೆ ಅನೇಕರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News