×
Ad

ಆಳಂದ | ಹಾವು ಕಚ್ಚಿದಾಗ ಸಾಂಪ್ರದಾಯಿಕ ಚಿಕಿತ್ಸೆ ಬದಲು ವೈದ್ಯಕೀಯ ಚಿಕಿತ್ಸೆ ಪಡೆಯಿರಿ : ಡಾ.ಉಮಾಕಾಂತ

Update: 2025-07-19 18:32 IST

ಕಲಬುರಗಿ: ಹಾವು ಕಡಿತ ಪ್ರಕರಣ ಸಂಭವಿಸಿದಾಗ ಸಾಂಪ್ರದಾಯಿಕ ಚಿಕಿತ್ಸೆ ಹೋರಹೋಗದೆ ತಕ್ಷಣಕ್ಕೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ ಸಕಾಲಕ್ಕೆ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು ಎಂದು ಆಳಂದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಡಾ.ಉಮಾಕಾಂತ ಅವರು ಸಾರ್ವಜನಿಕರಿಗೆ ಸಲಹೆ ನೀಡಿದರು.

ಆಳಂದ ಪಟ್ಟಣದ ಮಟಕಿ ರಸ್ತೆಯಲ್ಲಿರುವ ತಾಲ್ಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಹಮ್ಮಿಕೊಂಡ ಮುಖ್ಯ ಆಡಳಿತಾಧಿಕಾರಿ ಡಾ.ಮಹಾಂತಪ್ಪ ಹಾಳಮಳಿ ಅವರ ಬಡ್ತಿ ವರ್ಗಾವಣೆ ಪ್ರಯುಕ್ತ ಹಮ್ಮಿಕೊಂಡ ಬೀಳ್ಕೊಡುಗೆ ಸನ್ಮಾನ ಕೈಗೊಂಡು ಅವರು ಮಾತನಾಡಿದರು.

ಆಸ್ಪತ್ರೆಯಲ್ಲಿ ಆಂಟಿ ಸ್ನೇಕ್ ವೆನಮ್ (ಎಎಸ್‌ವಿ), ಸೇರಿದಂತೆ ಅಧುನಿಕ ಚಿಕಿತ್ಸಾ ಸೌಲಭ್ಯಗಳಿದ್ದರೂ, ಜನರು ಸಾಂಪ್ರದಾಯಿಕ ಗಿಡಮೂಲಿಕೆ ಚಿಕಿತ್ಸೆ ಅಥವಾ ಮಂತ್ರವಾದಿಗಳನ್ನು ಅವಲಂಬಿಸುವುದರಿಂದ ತಡವಾಗಿ ಆಸ್ಪತ್ರೆಗೆ ಆಗಮಿಸುತ್ತಿದ್ದಾರೆ. ಇದು ಗಂಭೀರ ಪರಿಣಾಮಗಳಿಗೆ ಕಾರಣವಾಗುತ್ತದೆ. ರಸೆಲ್ ವೈಪರ್, ಕಾಮನ್ ಕ್ರೇಟ್, ಮತ್ತು ನಾಗರ ಹಾವುಗಳಿಂದ ಹೆಚ್ಚಿನ ವಿಷಕಾರಕ ಪ್ರಕರಣಗಳು ಕಂಡುಬರುತ್ತವೆ. ಆಸ್ಪತ್ರೆಯಲ್ಲಿ ನ್ಯೂರೋಟಾಕ್ಸಿಕ್ ಮತ್ತು ಹಿಮೋಟಾಕ್ಸಿಕ್ ವಿಷದ ಚಿಕಿತ್ಸೆಗೆ ಸೂಕ್ತ ವ್ಯವಸ್ಥೆ ಇದೆ ಎಂದು ತಿಳಿಸಿದರು.

ಬೀಳ್ಕೊಡುಗೆ ಸನ್ಮಾನ ಸ್ವೀಕರಿಸಿದ ಡಾ. ಮಹಾಂತಪ್ಪ ಹಾಳಮಾಳಿ ಅವರು ಮಾತನಾಡಿ, ಹಾವು ಕಡಿದ ನಂತರ ಮೊದಲ ಕೆಲವು ಗಂಟೆಗಳು (ಗೋಲ್ಡನ್ ಅವರ್ಸ್) ಚಿಕಿತ್ಸೆಗೆ ನಿರ್ಣಾಯಕವಾಗಿದ್ದು, ತಕ್ಷಣ ಆಸ್ಪತ್ರೆಗೆ ಆಗಮಿಸಿದರೆ ಜೀವ ಉಳಿಸಬಹುದು. ಸರ್ಪವನ್ನು ಗುರುತಿಸಲು ಚಿತ್ರ ತೆಗೆಯುವುದು ಚಿಕಿತ್ಸೆಗೆ ಸಹಾಯಕವಾಗುತ್ತದೆ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಡಾ.ಮಹಾಂತಪ್ಪ ಹಾಳಮಳಿ ಸೇರಿದಂತೆ ಆಸ್ಪತ್ರೆಯ ವರ್ಗಾಯಿತ ಸಿಬ್ಬಂದಿ ಶ್ರೀಕಾಂತ ಕೆಂಗೇರಿ ಭೂಸನೂರ, ಶರಣು ಪ್ಯಾಟಿ ಮತ್ತು ಪ್ರಕಾಶ ಜಾಧವ ಅವರನ್ನು ಆಸ್ಪತ್ರೆಯ ವೈದ್ಯರು, ದಾದಿಯರು, ಮತ್ತು ಇತರ ಸಿಬ್ಬಂದಿಗಳು ಶಾಲು ಹೊದಿಸಿ, ಸ್ಮರಣಿಕೆಯನ್ನು ನೀಡಿ ಗೌರವಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News