ಆಳಂದ | ವಿಶ್ವ ಅಧಿಕ ರಕ್ತದೊತ್ತಡ ದಿನಾಚರಣೆ
ಕಲಬುರಗಿ : ಸರಕಾರಿ ಸಾರ್ವಜನಿಕ ಆಸ್ಪತ್ರೆ ಆಳಂದದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಸಾಂಕ್ರಾಮಿಕ ರೋಗಗಳ ಘಟಕ ಆಳಂದ, ನಗರ ಪ್ರಾಥಮಿಕ ಕೇಂದ್ರ ಆಳಂದ ಮತ್ತು ಜೀವನ ಜ್ಯೋತಿ ಮಹಿಳಾ ಅಭಿವೃದ್ಧಿ ಸಂಘ ಕಲಬುರಗಿ ಅವರುಗಳ ಸಂಯುಕ್ತಾಶ್ರಯದಲ್ಲಿ ಆಳಂದ ಪಟ್ಟಣದ ಶರಣ ನಗರದ ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ಶನಿವಾರ ವಿಶ್ವ ಅಧಿಕ ರಕ್ತದೊತ್ತಡ ದಿನಾಚರಣೆಯನ್ನು ಆಚರಿಸಲಾಯಿತು.
ಸಾರ್ವಜನಿಕ ಆಸ್ಪತ್ರೆ ಆಳಂದ ಅಸಾಂಕ್ರಾಮಿಕ ರೋಗಗಳ ಘಟಕದ ಆಪ್ತ ಸಮಾಲೋಚಕರಾದ ಕಲ್ಯಾಣಿ ಹರಳಯ್ಯ ಮಾತನಾಡಿ, ಇಂದಿನ ಜನರ ಜೀವನಶೈಲಿಯು ಅವರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಅದಕ್ಕಾಗಿ ನಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಅಧಿಕಾರ ನಿಯಂತ್ರಣದಲ್ಲಿ ಇಡಲು ನಮ್ಮ ದೇಹದ ತೂಕ ಸರಿಯಾದ ಪ್ರಮಾಣದಲ್ಲಿ ಇಟ್ಟುಕೊಳ್ಳಬೇಕು. ಮಿತವಾದ ಆಹಾರ ಸೇವನೆ ಮಾಡಬೇಕು, ಸರಿಯಾದ ಪ್ರಮಾಣದಲ್ಲಿ ಉಪ್ಪು ಸೇವನೆ ಮಾಡಬೇಕು. ಸಾರಾಯಿ ಸಿಗರೇಟ್ ಮಧ್ಯಪಾನ ಧೂಮಪಾನ ಜಂಕ್ ಫುಡ್ ಸೇವನೆ ಮಾಡಬಾರದು ಎಂದು ಸಲಹೆ ನೀಡಿದರು.
ಆಪ್ತ ಸಮಾಲೋಚಕ ಸಿದ್ದಣ್ಣ ಮಾತನಾಡಿದರು. ನಗರದ ಪುರಸಭೆಯ ಸದಸ್ಯ ರಾಜಕುಮಾರ ಸಣ್ಮುಖ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ನಮ್ಮ ಆರೋಗ್ಯ ಇಲಾಖೆಯ ಶಿವಮ್ಮ ಪಾಟೀಲ, ಸೂರ್ಯಕಾಂತ್ ತಟ್ಟಿ, ಉಮಾ ಅಮುಗೆ, ಇಂದಿರಾಬಾಯಿ ಕಟ್ಟೆ, ಸುನಿಲ್ ಕುಮಾರ್ ಎ ಜೆ, ಅಭಿವೃದ್ಧಿನ್ ಮುಜಾವರ್, ಪ್ರಕಾಶ್ ಕದಣಿ, ದೇವಾನಂದ್ ದೊಡ್ಮನಿ, ಅಂಗನವಾಡಿ ಕಾರ್ಯಕರ್ತೆಯಾದ ಕವಿತಾ ಕೋರೆ ಸಹಾಯಕಿಯಾದ ಗಂಧರ್ಬಾಯ್ ಒಣದೇ, ಜೀವನ ಜ್ಯೋತಿ ಮಹಿಳಾ ಅಭಿವೃದ್ಧಿ ಸಂಸ್ಥೆಯ ಸಿಬ್ಬಂದಿಗಳಾದ ಉಷಾ ವಗ್ಗೇ, ಗೌರಮ್ಮ ಕೊಗ್ನೋರ ಉಪಸ್ಥಿತರಿದ್ದರು.