ಕನ್ನಡದ ಅಸ್ಮಿತೆ, ಆತ್ಮಗೌರವ ಉಳಿಸಲು ಎಲ್ಲರೂ ಕೈಜೋಡಿಸಿ: ತಹಶೀಲ್ದಾರ್ ಅಣ್ಣಾರಾವ್ ಪಾಟೀಲ್
ಕಲಬುರಗಿ: ಸಾವಿರಾರು ವರ್ಷಗಳ ಇತಿಹಾಸ, ಶ್ರೀಮಂತ ಸಾಹಿತ್ಯ ಪರಂಪರೆ, ವೈವಿಧ್ಯಮಯ ಸಂಸ್ಕೃತಿ, ಕಲೆ ಹಾಗೂ ಬದುಕಿನ ಸೊಬಗನ್ನು ಹೊಂದಿರುವ ಕನ್ನಡ ನಾಡಿನ ಭಾಷೆ, ನೆಲ, ಜಲ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿಯಾಗಿದೆ. ಕನ್ನಡವೆಂಬುದು ಕೇವಲ ಭಾಷೆಯಲ್ಲ, ಅದು ನಮ್ಮ ಅಸ್ಮಿತೆ, ಆತ್ಮಗೌರವ ಮತ್ತು ಬದುಕಿನ ಉಸಿರು. ಕನ್ನಡದ ಕಂಪು ಜಗದಗಲ ಪಸರಿಸುವುದರೊಂದಿಗೆ ಕನ್ನಡಿಗರ ಹೆಮ್ಮೆ ನಿತ್ಯವೂ ಬೆಳಗಬೇಕು ಎಂದು ತಹಶೀಲ್ದಾರ ಅಣ್ಣಾರಾವ್ ಪಾಟೀಲ್ ಹೇಳಿದರು.
ಪಟ್ಟಣದ ಹೂರ ವಲಯದಲ್ಲಿರುವ ತಾಲೂಕು ಆಡಳಿತ ಸೌಧದಲ್ಲಿ ತಾಲೂಕು ಆಡಳಿತ ವತಿಯಿಂದ ಕನ್ನಡ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಹಾಗೂ ಕಳೆದ ವರ್ಷ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಿ ಮಾತನಾಡಿದ ಅವರು, ಪೂರ್ವಸಿದ್ಧತಾ ಸಭೆಗಳಲ್ಲಿ ಕಾರ್ಯಕ್ರಮವನ್ನು ಹೇಗೆ ಆಯೋಜಿಸಬೇಕು ಎಂಬವುದರ ಕುರಿತು ಸಲಹೆಗಳನ್ನು ನೀಡಿದರು.
ಮುಖ್ಯ ಅತಿಥಿ ಕಸಾಪ ತಾಲೂಕು ಅಧ್ಯಕ್ಷ ಹಣಮಂತ ಶೇರಿ ಮಾತನಾಡಿ, ಕನ್ನಡದ ಅಭಿಮಾನ ನಮ್ಮ ಮಾತಿನಲಷ್ಟೇ ಇರದೆ, ನಮ್ಮ ನಡೆ ನುಡಿಗಳಲ್ಲಿಯೂ ಪ್ರತಿಫಲಿಸಬೇಕು, ಕನ್ನಡದ ಕೀರ್ತಿ ಹೆಚ್ಚಿಸುವ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆಗಳು ನೀಡಬೇಕು, ಅಂದಾಗ ಮಾತ್ರ ಕನ್ನಡ ಸಮೃದ್ಧಿವಾಗಿ ಬೆಳೆಯಲು ಸಾಧ್ಯ ಎಂದರು.
ಈ ವೇಳೆ ಧುತರಗಾವಂದ ಪ್ರೌಢ ಶಾಲೆಯ ಶಿಕ್ಷಕಿ ರಾಜಶ್ರೀ ಒಂಟಿ ಉಪನ್ಯಾಸ ನೀಡಿದರು.
ಮುಖ್ಯಾಧಿಕಾರಿ ಸಂಗಮೇಶ ಪನಶೆಟ್ಟಿ ಹಾಗೂ ಡಾ. ಯಲ್ಲಪ್ಪ ಇಂಗಳೆ, ಸುರೇಂದ್ರನಾಥ, ಹೋನೆಶ ಅಳಗಿ ವೇದಿಕೆಯಲ್ಲಿ ಇದ್ದರು, ಮಹಾಂತೇಶ ಸಣಮನಿ, ಮಹಾದೇವ ಹತ್ತಿ, ಶರಣು ಹಕ್ಕಿ, ಪಂಕಜ ಪಾಟೀಲ, ಆನಂದ ಪೂಜಾರಿ, ಅಧಿಕಾರಿಗಳು ಉಪಸ್ಥಿತರಿದ್ದರು.
ಕಲ್ಯಾಣಪ್ಪ ಬಿಜ್ಜರಗಿ ನಿರೂಪಿಸಿದರು, ರಾಕೇಶ್ ಶೀಲ್ಡ ಸ್ವಾಗತ ಕೋರಿದರು, ಆಕಾಶ ಸಜ್ಜನ ವಂದಿಸಿದರು.