​ಚಿಂಚೋಳಿ: ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ, ಉದ್ಯೋಗಿಕ ಹಾಗೂ ಸಮಗ್ರ ಅಭಿವೃದ್ಧಿಗಾಗಿ 371ಜೆ ಮೀಸಲಾತಿ ಕಲ್ಪಿಸಿಕೊಟ್ಟ ಧೀಮಂತ ನಾಯಕ, ಮಾಜಿ ಸಚಿವ ದಿವಂಗತ ವೈಜಿನಾಥ ಪಾಟೀಲ್ ಅವರ 6ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮವು ಕುಟುಂಬದ ಸದಸ್ಯರು ಮತ್ತು ಅಭಿಮಾನಿಗಳಿಂದ ಶ್ರದ್ಧಾ ಭಕ್ತಿಯಿಂದ ನಡೆಯಿತು.

​ಪಟ್ಟಣದಲ್ಲಿರುವ ದಿವಂಗತ ಶ್ರೀಮತಿ ಜ್ಞಾನೇಶ್ವರಿ ಹಾಗೂ ದಿವಂಗತ ವೈಜಿನಾಥ ಪಾಟೀಲ್ ಅವರ ಸ್ಮಾರಕಕ್ಕೆ ಕುಟುಂಬಸ್ಥರು ವಿಶೇಷ ಪೂಜೆ ನೆರವೇರಿಸಿ, ಪುಷ್ಪ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ದಿವಂಗತರ ಪುತ್ರರಾದ ಡಾ. ವಿಕ್ರಮ್ ಪಾಟೀಲ್, ಗೌತಮ್ ಪಾಟೀಲ್, ಡಾ. ಬಸವೇಶ್ ಪಾಟೀಲ್, ಪುತ್ರಿಯರಾದ ಭಾರತಿ ಉಮೇಶ್ ಪಾಟೀಲ್, ಆರತಿ ವಿಶ್ವನಾಥ ಪಾಟೀಲ್ ಬುರಗಪಳ್ಳಿ ಹಾಗೂ ಸೊಸೆಯಂದಿರು, ಮೊಮ್ಮಕ್ಕಳು ಮತ್ತು ಕುಟುಂಬದ ಆಪ್ತರು ಪೂಜಾ ಕೈಂಕರ್ಯಗಳನ್ನು ಪೂರೈಸಿ ಸಾರ್ವಜನಿಕರಿಗೆ ಅನ್ನಪ್ರಸಾದ ವಿತರಿಸಿದರು.

​ದಿವಂಗತ ವೈಜಿನಾಥ ಪಾಟೀಲ್ ಅವರ ಗರಡಿಯಲ್ಲಿ ಬೆಳೆದು ರಾಜಕೀಯ ಬದುಕು ಕಂಡುಕೊಂಡಿರುವ ವಿವಿಧ ಜಿಲ್ಲೆಗಳ ನಾಯಕರು, ಅಭಿಮಾನಿಗಳು, ಹಿತೈಷಿಗಳು ಹಾಗೂ ವಿವಿಧ ಪಕ್ಷಗಳ ರಾಜಕೀಯ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ಮಾರಕಕ್ಕೆ ಶ್ರದ್ಧಾಂಜಲಿ ಸಲ್ಲಿಸಿದರು.

​ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಕೆ. ಎಂ. ಬಾರಿ,ಕುಪೇಂದ್ರರಾವ್ ಫತ್ತೇಪೂರ್,ಅಬ್ದುಲ್ ಬಾಶೀದ್, ಭೀಮಶೆಟ್ಟಿ ಮುರುಡ, ರವಿರಾಜ ಕೊರವಿ,ಸಂತೋಷ ಗಡಂತಿ,ಹನುಮಂತ ಪೂಜಾರಿ, ಮುಕುಂದ ದೇಶಪಾಂಡೆ,ಸಂತೋಷ ಗುತ್ತೇದಾರ,ವಕೀಲ ಚಂದ್ರಶೆಟ್ಟಿ ಜಾಧವ್, ಭವಾನಿ ಪಾಟೀಲ್ ಚಂದನಕೇರಾ, ಗೋಪಾಲರೆಡ್ಡಿ ಕಲ್ಲೂರ್, ಶಾಂತವೀರ ಹೀರಾಪೂರ್, ಚಂದ್ರಶೇಖರ ಹರಸೂರ್, ಡಾ. ಮಲ್ಲಿಕಾರ್ಜುನ ಪಾಲಾಮೂರ್, ಉಮೇಶ ಬೆಳಕೇರಿ, ನಾಗೇಶ ಮಲಕೋಡ್, ಲೋಕೇಶ ಶೇಳಗಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor