ಕಲಬುರಗಿ; ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (ಸಿಯುಕೆ) ಮತ್ತು ಕಲಬುರಗಿ ಜಿಲ್ಲೆಯ ಮರ್ತೂರಿನ ವಿಜ್ಞಾನೇಶ್ವರ ಪ್ರತಿಷ್ಟಾನ ಟ್ರಸ್ಟ್ (ರಿ.) ಶೈಕ್ಷಣಿಕ ಸಹಯೋಗ, ಸಂಶೋಧನೆ ಮತ್ತು ಜ್ಞಾನ ವಿನಿಮಯಕ್ಕಾಗಿ ಸಾಂಸ್ಥಿಕ ಪಾಲುದಾರಿಕೆಯನ್ನು ಸ್ಥಾಪಿಸುವ ಉದ್ದೇಶದಿಂದ ಸೋಮವಾರ ವಿಶ್ವವಿದ್ಯಾಲಯದ ಸೆಮಿನಾರ್ ಸಭಾಂಗಣದಲ್ಲಿ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿದವು.

ಸಿಯುಕೆಯ ಕಾನೂನು ಅಧ್ಯಯನ ವಿಭಾಗ ಮತ್ತು ವಿಜ್ಞಾನೇಶ್ವರ ಪ್ರತಿಷ್ಟಾನ ಟ್ರಸ್ಟ್ ನಡುವೆ ಏರ್ಪಟ್ಟಿರುವ ಈ ಒಪ್ಪಂದವು, ಸಹಯೋಗದ ಶೈಕ್ಷಣಿಕ ಹಾಗೂ ಸಂಶೋಧನಾ ಉಪಕ್ರಮಗಳ ಮೂಲಕ ಭಾರತೀಯ ನ್ಯಾಯಶಾಸ್ತ್ರ ಮತ್ತು ಅದಕ್ಕೆ ಸಂಬಂಧಿಸಿದ ಇತರ ಅಧ್ಯಯನ ಕ್ಷೇತ್ರಗಳನ್ನು ಉತ್ತೇಜಿಸುವ, ಸಂರಕ್ಷಿಸುವ ಹಾಗೂ ಪ್ರಸಾರ ಮಾಡುವ ಗುರಿಯನ್ನು ಹೊಂದಿದೆ.

ಈ ಸಹಯೋಗದ ವ್ಯಾಪ್ತಿಯಲ್ಲಿ ಶೈಕ್ಷಣಿಕ ಮತ್ತು ಸಂಶೋಧನಾ ಚಟುವಟಿಕೆಗಳು, ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರ ಭಾಗವಹಿಸುವಿಕೆ, ಪಠ್ಯಕ್ರಮ ಅಭಿವೃದ್ಧಿ, ಶೈಕ್ಷಣಿಕ ಕಾರ್ಯಕ್ರಮಗಳ ಆಯೋಜನೆ, ಗ್ರಂಥಾಲಯ ಮತ್ತು ಅಧ್ಯಯನ ಸೌಲಭ್ಯಗಳ ಬಳಕೆ, ಜಂಟಿ ಸಂಶೋಧನಾ ಯೋಜನೆಗಳು ಮತ್ತು ಪ್ರಕಟಣೆಗಳು, ವಿಚಾರ ಸಂಕಿರಣಗಳು, ಸಮ್ಮೇಳನಗಳು ಹಾಗೂ ಜನಸಂಪರ್ಕ ಚಟುವಟಿಕೆಗಳು ಸೇರಿವೆ. 

ಸಿಯುಕೆಯ ಕುಲಸಚಿವ ಪ್ರೊ. ಆರ್. ಆರ್. ಬಿರಾದಾರ ಮತ್ತು ವಿಜ್ಞಾನೇಶ್ವರ ಪ್ರತಿಷ್ಟಾನ  ಟ್ರಸ್ಟ್ (ರಿ.), ಮರ್ತೂರಿನ ಅಧ್ಯಕ್ಷರಾದ ಶ್ರೀ ಬಸವರಾಜ ಪಾಟೀಲ್ ಸೇಡಂ ಅವರು, ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಅವರ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಹಾಕಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor