ಕಲಬುರಗಿ | ಉತ್ತರ ಮತಕ್ಷೇತ್ರದಲ್ಲಿ ಹದಗೆಟ್ಟ ರಸ್ತೆಗಳ ನಿರ್ಮಾಣಕ್ಕೆ ಮನವಿ
ಕಲಬುರಗಿ: ಇಲ್ಲಿನ ಉತ್ತರ ಮತಕ್ಷೇತ್ರದ ಪ್ರಮುಖ ರಸ್ತೆಗಳು ತೀರ ಹದಗೆಟ್ಟಿದ್ದು, ತಕ್ಷಣ ರಸ್ತೆ ದುರಸ್ಥಿ ಮತ್ತು ಹೊಸ ರಸ್ತೆ ನಿರ್ಮಿಸಬೇಕೆಂದು ಸಿಟಿಜನ್ಸ್ ಲೀಗಲ್ ಅಕಾಡೆಮಿಯ ಸದಸ್ಯರು ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿ, ಒತ್ತಾಯಿಸಿದರು.
ಎಂ.ಜಿ.ರೋಡ್, ಬಿ.ಬಿ.ರಝಾ ಕಾಲೇಜಿನಿಂದ ಮೊ.ರಫಿ ಚೌಕ್, ರೋಜಾ ಮಾರುಕಟ್ಟೆ, ದರ್ಗಾದಿಂದ ರಾಮಜೀ ನಗರಹಗರಗಾ ಕ್ರಾಸ್ ಹಾಗೂ ಮುಸ್ಲಿಂ ಚೌಕ್ನಿಂದ ಹಫ್ತ್ ಗುಂಜ್ ರೋಡ್ ತನಕದ ರಸ್ತೆಗಳು ಹದಗೆಟ್ಟಿದ್ದು, ತಕ್ಷಣ ದುರಸ್ತಿ ಕಾರ್ಯ ಕೈಗೊಳ್ಳಬೇಕೆಂದು ಮಂಡಳಿಗೆ ಅಧ್ಯಕ್ಷ ನ್ಯಾಯವಾದಿ ಅಬ್ದುಲ್ ಜಬ್ಬಾರ್ ಗೋಲಾ ತಿಳಿಸಿದ್ದರು.
ಈ ವೇಳೆ ಪಾಲಿಕೆ ಆಯುಕ್ತರು ಶೀಘ್ರದಲ್ಲೇ ರಸ್ತೆ ದುರಸ್ತಿ ಕಾಮಗಾರಿ ಪ್ರಾರಂಭವಾಗಲಿದ್ದು, ಸಂಬಂಧಿತ ಟೆಂಡರ್ ಕೂಡಾ ಮಂಜೂರಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ಎಂಜಿನಿಯರ್ ಮಿರ್ ಆಸಿಫ್ ಅಲಿ, ಡಾ. ಅಬ್ದುಲ್ ಬಾರಿ, ಡಾ. ಚಂದಾ ಹುಸೇನಿ ಅಕ್ಬರ್, ಅಬ್ದುಲ್ ಹನ್ನಾನ್ ಶಾಹಿದ್, ಅಬ್ದುಲ್ ಗಫ್ಫಾರ್ ಹಾಗೂ ಇತರರು ಹಾಜರಿದ್ದರು.