ಔರಾದ್ | ಅನಾಥ ಮಕ್ಕಳ ಪೋಷಕರು ಡಾ.ಬಸವಲಿಂಗ ಪಟ್ಟದೇವರು : ನವೀಲಕುಮಾರ್ ಉತ್ಕಾರ್
Update: 2025-08-25 21:20 IST
ಔರಾದ್: ಮಾತೃ ಹೃದಯಿ, ಅಕ್ಷರ ಸಂತರಾಗಿರುವ ಡಾ.ಬಸವಲಿಂಗ ಪಟ್ಟದೇವರು ಅನಾಥ ಮಕ್ಕಳನ್ನು ಪಾಲನೆ ಪೋಷಣೆ ಮಾಡಿದ್ದಾರೆ ಎಂದು ಪ್ರಾಂಶುಪಾಲ ನವೀಲಕುಮಾರ್ ಉತ್ಕಾರ್ ಅವರು ಹೇಳಿದರು.
ಇಂದು ಸಂತಪುರ ಗ್ರಾಮದ ಸಿದ್ದರಾಮೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಭಾಲ್ಕಿ ಹಿರೇಮಠದ ನಾಡೋಜ ಡಾ.ಬಸವಲಿಂಗ ಪಟ್ಟದೇವರ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಅನಾಥ ಮಕ್ಕಳಿಗೆ ಬಟ್ಟೆ ವಿತರಿಸಿ ಅವರು ಮಾತನಾಡಿದರು.
ಡಾ. ಬಸವಲಿಂಗ ಪಟ್ಟದೇವರು ರಾಜ್ಯದಲ್ಲಿ ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣ ನೀಡುತ್ತಿದ್ದಾರೆ. ಬಹಳಷ್ಟು ಸಮಾಜೋದ್ಧಾರಕ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಉಪನ್ಯಾಸಕ ಶಿವಪುತ್ರ ಧರಣಿ, ಸುಧಾ ಕೌಟಿಗೆ, ಮೀರಾತಾಯಿ ಕಾಂಬಳೆ, ಪ್ರಿಯಾಂಕಾ ಗೊನ್ನಳ್ಳಿಕರ, ಅಶ್ವಿನಿ ಹಿಂದೊಡ್ಡಿ, ಮಹಾಂತೇಶ್ ಪಂಚಾಳ್, ಜಿತೇಂದ್ರ ಡಿಗ್ಗಿ, ಸಂತೋಷ ಧೂಳ್ಗಂಡೆ, ಸುಧೀರ್ ಆಲೂರೇ ಹಾಗೂ ಸುರೇಶ್ ಬಂಡೆ ಇದ್ದರು.