×
Ad

ಸಿಎಂ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಹೈಕಮಾಂಡ್‌ಗೆ ಬಿಟ್ಟ ವಿಚಾರ : ಬಿ.ಕೆ.ಹರಿಪ್ರಸಾದ್

Update: 2025-02-16 13:17 IST

 ಬಿ.ಕೆ.ಹರಿಪ್ರಸಾದ್

ಕಲಬುರಗಿ : ರಾಜ್ಯದಲ್ಲಿ ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರ ಸೇರಿದಂತೆ ರಾಜಕೀಯ ವಿಚಾರವಾಗಿರುವ ಬದಲಾವಣೆ ಎಲ್ಲವೂ ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.

ರವಿವಾರ ಕಲಬುರಗಿ ನಗರದಲ್ಲಿ ಮಾತನಾಡಿದ ಅವರು, ನಮ್ಮ ಹೈಕಮಾಂಡ್ ಕಲಬುರಗಿಯಲ್ಲೇ ಇದ್ದಾರೆ. ಏನೇ ಇದ್ದರೂ ಅವರನ್ನೇ ಕೇಳಿ, ರಾಜ್ಯದಲ್ಲಿ ನಮ್ಮ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಈ ರೀತಿಯಲ್ಲಿ ಚರ್ಚೆಗಳು ಗೊಂದಲಗಳು ನಡೆಯುತ್ತಿದೆ ಎಂದರು.

ಸಿಎಂ, ಕೆಪಿಸಿಸಿ ಅಧ್ಯಕ್ಷ ಸೇರಿದಂತೆ ಯಾವುದೇ ರಾಜಕೀಯ ಬದಲಾವಣೆಗಳ ಎಲ್ಲಾ ಕೆಲಸಗಳನ್ನು ಹೈಕಮಾಂಡ್ ಮತ್ತು ಪಕ್ಷದಿಂದ ನೇಮಕಗೊಂಡ ಉಸ್ತುವಾರಿಗಳು ನೋಡಿಕೊಳ್ಳಲಿದ್ದಾರೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News