×
Ad

ಚಿಂಚೋಳಿ | ಭೋವಿ ಸಮಾಜದ ಆರ್ಥಿಕ ಪ್ರಗತಿಗೆ ಶಿಕ್ಷಣವೇ ಅಸ್ತ್ರ : ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ

ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮ

Update: 2026-01-15 18:13 IST

ಚಿಂಚೋಳಿ : ಭೋವಿ ಸಮಾಜದ ಮುಖಂಡರು ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕಾದರೆ ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡಬೇಕು ಎಂದು ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ಅವರು ಕರೆ ನೀಡಿದರು.

ಪಟ್ಟಣದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ʼಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮʼದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಭೋವಿ ವಡ್ಡರ ಸಮಾಜದವರು ಕೇವಲ ಕೂಲಿ ಕಸಬಿಗೆ ಸೀಮಿತವಾಗದೆ, ಇತರೆ ವೃತ್ತಿಗಳ ಮೂಲಕ ಆರ್ಥಿಕವಾಗಿ ಬೆಳೆಯಬೇಕು ಎಂದರು.

ಸರ್ಕಾರದ ವಿವಿಧ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಸಮುದಾಯದಲ್ಲಿ ಒಗ್ಗಟ್ಟು ಇರಬೇಕು ಮತ್ತು ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಹೇಳಿದರು.

ಗ್ಯಾರೆಂಟಿ ಸಮಿತಿಯ ಅಧ್ಯಕ್ಷರಾದ ಬಸವರಾಜ ಮಾಲಿ ಮಾತನಾಡಿ, "ವಚನ ಕ್ಷೇತ್ರದಲ್ಲಿ ಸಿದ್ದರಾಮೇಶ್ವರರ ಕೊಡುಗೆ ಅಪಾರ. ಅವರು ಶ್ರಮಯೋಗಿಯಾಗಿದ್ದು, ಅಂದಿನ ಕಾಲದಲ್ಲೇ ಕೆರೆ-ಕಟ್ಟೆಗಳನ್ನು ನಿರ್ಮಿಸುವ ಮೂಲಕ ಪರಿಸರ ಮತ್ತು ಜಲ ಸಂರಕ್ಷಣೆಯ ಮಹತ್ವ ಸಾರಿದ್ದರು. ಅವರು ಕೇವಲ ಒಂದು ಜಾತಿಗೆ ಸೀಮಿತವಾಗದೆ, ಸಕಲ ಜೀವರಾಶಿಗಳ ಒಳಿತಿಗಾಗಿ ಶ್ರಮಿಸಿದವರು," ಎಂದು ಬಣ್ಣಿಸಿದರು.

ಈ ಸಂದರ್ಭದಲ್ಲಿ ವೀರೇಶ, ವೀರಶೆಟ್ಟಿ ರಾಠೋಡ, ವಿಠಲ ಕುಸಾಳೆ, ಅಬ್ದುಲ್ ಬಾಸೀದ್, ಮಹೇಶ ರಾಣಾಪೂರ್, ಸತೀಷ ಕಿತ್ತೂರ, ದಯಸಾಗರರ ಸತೀಷಕುಮಾರ, ಜಗನ್ನಾಥ, ಕೆ.ಎಮ್.ಬಾರಿ , ಹಣಮಂತ ಭೋವಿ, ಸಿದ್ದೇಶಕುಮಾರ, ಗೋಪಾಲ ಇಡಗೊಟಿ, ಶ್ರೀಕಾಂತ್, ಜಯಪ್ಪ ಚಾಪೆಲ್ ಮತ್ತಿತ್ತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News