×
Ad

ಚಿತ್ತಾಪೂರ | ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೆಚ್ಚುವರಿ ಬಸ್ ಬಿಡುಗಡೆ ಮಾಡುವಂತೆ ಆಗ್ರಹ

Update: 2025-07-02 18:36 IST

ಕಲಬುರಗಿ: ಚಿತ್ತಾಪೂರ ತಾಲೂಕಿನ ಇಂಗನಕಲ್, ಮತ್ತಿಮೂಡ, ಮುಚಕೇಡ ಹಾಗೂ ಕಲಗುರ್ತಿ ಗ್ರಾಮದ ವಿಧ್ಯಾರ್ಥಿಗಳು ಶಾಲಾ-ಕಾಲೇಜುಗಳಲ್ಲಿ ಗ್ರಾಮೀಣ ಭಾಗದ ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಸಮಯಕ್ಕೆ ಸರಿಯಾಗಿ ತರಗತಿಗಳಿಗೆ ತಲುಪಲು ಅನುಕೂಲವಾಗುವಂತೆ ಹೆಚ್ಚಿನ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಬಿಜೆಪಿ ಎಸ್ಸಿ ಮೋರ್ಚಾ ಮಂಡಲ ಅಧ್ಯಕ್ಷ ಗುಂಡು ಮತ್ತಿಮಡು ಆಗ್ರಹಿಸಿದ್ದಾರೆ.

150ಕ್ಕೂ ಅಧಿಕ ವಿದ್ಯಾರ್ಥಿಗಳು ದಿನ ನಿತ್ಯ ವ್ಯಾಸಂಗಕ್ಕಾಗಿ ಇಂಗನಕಲ್, ಮತ್ತಿಮಡು, ಕಲಗುರ್ತಿ ಹಾಗೂ ಮುಚಕೇಡ ಗ್ರಾಮದಿಂದ ಮಾಡಬೂಳಗೆ ತೆರಳುತ್ತಾರೆ. ಸರಕಾರಿ ಬಸ್‍ ಅನ್ನು ಹತ್ತಲು ವಿಪರೀತ ದಟ್ಟಣೆ ಇದ್ದುದರಿಂದ ವಿದ್ಯಾರ್ಥಿಗಳಿಗೆ ಬಸ್ ಹತ್ತಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಹೆಚ್ಚುವರಿ ಬಸ್ ಸಂಪರ್ಕ ಕಲ್ಪಿಸಲು ಮುಂದಾಗಬೇಕು ಎಂದು ಅವರು ಒತ್ತಾಯಿಸಿದರು.

ಇಂಗನಕಲ್, ಕಲಗುರ್ತಿ,ಮತ್ತಿಮೂಡ, ಮುಚಕೇಡ ಮೊದಲಾದ ಗ್ರಾಮಗಳ ವಿದ್ಯಾರ್ಥಿಗಳು ಮಾಡಬೂಳ ಹಾಗೂ ಕಲಬುರಗಿಗೆ ಐಟಿಐ, ಪಿಯುಸಿ ಮತ್ತು ಪದವಿ ವ್ಯಾಸಂಗ ಮಾಡಲು ತೆರಳುತ್ತಾರೆ. ಈ ನಾಲ್ಕು ಗ್ರಾಮಕ್ಕೆ ದಿನ ನಿತ್ಯ ಒಂದೇ ಬಸ್ ಬರುತ್ತಿದ್ದು, ಅದು ಕೂಡಾ ಸರಿಯಾದ ಸಮಯಕ್ಕೆ ಬರುವುದಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಈ ಮೇಲೆ ತಿಳಿಸಿದ ಗ್ರಾಮದ ಗ್ರಾಮಸ್ಥರು ಬಸ್ ಡಿಪೋ ನಿರ್ದೇಶಕರಿಗೆ ಮನವಿ ಸಲ್ಲಿಸಿದರೂ ಕೂಡಾ ಯಾವುದೇ ಪ್ರಯೋಜನವಾಗಿಲ್ಲ. ಒಂದು ವೇಳೆ ವಾರದಲ್ಲಿ ಕ್ರಮ ಕೈಗೊಳ್ಳದಿದಲ್ಲಿ ಗ್ರಾಮಸ್ಥರೆಲ್ಲ ಸೇರಿ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News