×
Ad

ಚಿತ್ತಾಪುರ | ಬೈಕ್ ಕವರ್‌ನಲ್ಲಿದ್ದ ಹಣ ಕಳ್ಳತನ; ಸಿಸಿ ಟಿವಿಯಲ್ಲಿ ದೃಶ್ಯ ಸೆರೆ

Update: 2025-06-05 17:57 IST

ಕಲಬುರಗಿ: ಚಿತ್ತಾಪುರ ಪಟ್ಟಣದ ಬಸ್ ನಿಲ್ದಾಣದ ಎದುರುಗಡೆಯ ಅನಮೂಲ್ ಹೋಟೇಲ್ ಹತ್ತಿರ ಬೈಕ್‌ನ ಕವರ್‌ನಲ್ಲಿದ್ದ 1 ಲಕ್ಷ 50 ಸಾವಿರ ರೂ.ವನ್ನು ಕಳ್ಳರು ಕದ್ದು ಪರಾರಿಯಾಗಿರುವ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.

ಹಣ ಕಳೆದುಕೊಂಡವರನ್ನು ಮಂಜುನಾಥ ಕಾಶಿ ಎಂದು ಗುರುತಿಸಲಾಗಿದೆ.

ಮಂಜುನಾಥ ಕಾಶಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ನಿಂದ 1 ಲಕ್ಷ 50 ಸಾವಿರ ರೂ. ತೆಗೆದುಕೊಂಡು ಬೈಕ್ ಮೇಲೆ ಹೋಗುತ್ತಿದ್ದಾಗ, ಹಿಂದುಗಡೆಯಿಂದ ಬೈಕ್ ನಲ್ಲಿ ಬಂದ ಓರ್ವ ಕಳ್ಳ ನಿಮ್ಮ ಹಣ ಬಿದ್ದಿವೆ ನೋಡಿ ಎಂದು ಹೇಳಿದ ಕೂಡಲೇ ಮಂಜುನಾಥ ಅವರು ಬೈಕ್ ಮೇಲಿಂದ ಇಳಿದು 50 ರೂ.ಗಳ ಮೂರು ನೋಟುಗಳನ್ನು ಎತ್ತಿಕೊಳ್ಳಲು ಹೋಗಿದ್ದಾರೆ. ಈ ವೇಳೆ ಎದರುಗಡೆ ನಿಂತಿದ್ದ ಇನ್ನೊರ್ವ ಕಳ್ಳ ಬೈಕ್‌ ಕವರ್‌ನಲ್ಲಿದ್ದ ಹಣವನ್ನು ತೆಗೆದುಕೊಂಡು ಬೈಕ್ ಮೇಲೆ ಕುಳಿತು ಪರಾರಿಯಾಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸುದ್ದಿ ತಿಳಿಯುತ್ತಿದ್ದಂತೆ ಪಿಎಸ್ಐ ಶ್ರೀಶೈಲ್ ಅಂಬಾಟಿ, ಸಿಬ್ಬಂದಿಗಳಾದ ಸವಿಕುಮಾರ, ಬಸವರಾಜ, ರವಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News