×
Ad

ಚಿತ್ತಾಪುರ | ಕಿಡಿಗೇಡಿಗಳಿಂದ ಸೈಯ್ಯದ್ ಪೀರ್ ದರ್ಗಾ ಧ್ವಂಸ

Update: 2024-10-10 12:38 IST

ದರ್ಗಾವನ್ನು ಧ್ವಂಸಗೊಳಿಸಿರುವ ಕಿಡಿಗೇಡಿಗಳು

ಕಲಬುರಗಿ: ಚಿತ್ತಾಪುರ ಪಟ್ಟಣದ ಹೊರವಲಯದ ಕರದಳ್ಳಿ ರಸ್ತೆ ಪಕ್ಕದಲ್ಲಿರುವ ಸೈಯ್ಯದ್ ಪೀರ್ ದರ್ಗಾವನ್ನು ಕೆಲ ಕಿಡಿಗೇಡಿಗಳು ನಿನ್ನೆ(ಬುಧವಾರ) ತಡರಾತ್ರಿ ವೇಳೆ ಧ್ವಂಸಗೊಳಿಸಿರುವ ಘಟನೆ ಜರುಗಿದೆ.

ದರ್ಗಾದ ಗೇಟ್‌ನ ಬೀಗ ಮುರಿದು ಸುತ್ತಲೂ ಕಟ್ಟಿದ್ದ ಕಟ್ಟೆ ಮತ್ತು ದರ್ಗಾದ ಗೋಪುರವನ್ನು ದುಷ್ಕರ್ಮಿಗಳು ಧ್ವಂಸಗೊಳಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆಯ ಸುದ್ದಿ ತಿಳಿಯುತ್ತಿದಂತೆ ಪಿಎಸ್‌ಐ ಶ್ರೀಶೈಲ್ ಅಂಬಾಟಿ, ಸಿಬ್ಬಂದಿಗಳು ಹಾಗೂ ದರ್ಗಾದ ಉಸ್ತುವಾರಿ ಸೈಯ್ಯದ್ ಎಂಬವರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ʼದರ್ಗಾವನ್ನೆ ಗುರಿಯಾಗಿಸಿಟ್ಟಿಕೊಂಡು ಧ್ವಂಸಗೊಳಿಸಿರುವುದು ಸರಿಯಲ್ಲ. ಈ ಕೃತ್ಯದಲ್ಲಿ ಭಾಗಿಯಾಗಿಯಾದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ, ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕುʼ ಎಂದು ದರ್ಗಾದ ಉಸ್ತುವಾರಿ ಸೈಯ್ಯದ್ ಆಗ್ರಹಿಸಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News