×
Ad

ಚಿತ್ತಾಪುರ | ಫೆ.12 ರಂದು ಸನ್ನತಿಯಲ್ಲಿ ತ್ರಿಪಿಟಕ ಪಠಣ ಮಹೋತ್ಸವ : ಸಾಯಬಣ್ಣ ಬನ್ನಟ್ಟಿ

Update: 2025-02-11 17:11 IST

ಕಲಬುರಗಿ : ಚಿತ್ತಾಪುರ ತಾಲೂಕಿನ ಸನ್ನತಿ (ಕನಗನಹಳ್ಳಿ) ಗ್ರಾಮದ ಐತಿಹಾಸಿಕ ಬೌದ್ಧ ಮಹಾಸ್ಥೂಪದ ಆವರಣದಲ್ಲಿ ಫೆ.12ರಂದು ಬೆಳಿಗ್ಗೆ 10 ಗಂಟೆಗೆ ಸದ್ಧಮ್ಮ ಸಜ್ಜಾಯನ ಹಾಗೂ ತ್ರಿಪಿಟಕ ಪಠಣ ಮಹೋತ್ಸವ ಜರುಗಲಿದೆ ಎಂದು ಬೌದ್ಧ ಮಹಾಸ್ತೂಪ ಅಭಿವೃದ್ಧಿ ರಕ್ಷಣಾ ಸಂಸ್ಥೆಯ ಅಧ್ಯಕ್ಷ ಸಾಯಬಣ್ಣ ಬನ್ನಟ್ಟಿ ತಿಳಿಸಿದರು.

ಈ ಕುರಿತು ಮಂಗಳವಾರ ಪತ್ರಿಕಾ ಹೇಳಿಕೆ ನಿಡಿರುವ ಅವರು, ಬೆಳಿಗ್ಗೆ 10 ಗಂಟೆಗೆ ತ್ರಿಪಿಟಕ ಸದ್ಧಮ್ಮ ಸಜ್ಜಾಯನ 12.30ಕ್ಕೆ ಪವಿತ್ರ ತ್ರಿಪಿಟಕ ಪಠಣ ಜರುಗುವುದು. ಮಧ್ಯಾಹ್ನ 3 ಗಂಟೆಗೆ ಧಮ್ಮ ಪ್ರವಚನಾ ಹಾಗೂ ಸಮಾರೋಪ ಸಮಾರಂಭ ಜರುಗಲಿದೆ. ಭಂತೆ ಇತಿಕಾ ಮಹಾಥೇರಾ ಬೆಂಗಳೂರು ಮಹಾಬೋಧಿ ಸೊಸೈಟಿ ಅಧ್ಯಕ್ಷರಾದ ಭಂತೆ ಕಶ್ಯಪ ಮಹಾಥೇರಾ, ಪ್ರಧಾನ ಕಾರ್ಯದರ್ಶಿಗಳಾದ ಭಂತೆ ಆನಂದ ಥೇರಾ ಧಮ್ಮ ಸಂದೇಶ ನೀಡುವರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್, ಐಟಿ/ಬಿಟಿ ಹಾಗೂ ಸಚಿವರಾದ ಪ್ರಿಯಾಂಕ್ ಖರ್ಗೆ ಧಮ್ಮ ಧ್ವಜಾರೋಹಣ ನೆರವೇರಿಸುವರು. ಸಂಸದ ರಾಧಾಕೃಷ್ಣ ದೊಡ್ಡಮನಿ ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವರು. ಬೌದ್ಧ ಧಮ್ಮ ಹಾಗೂ ಸನ್ನತ್ತಿ ಶಾಸನಗಳ ಕುರಿತು ಸಂಶೋದಕ ಹರ್ಷಕುಮಾರ ಕುಗ್ವೆ ವಿಶೇಷ ಉಪನ್ಯಾಸ ನೀಡುವರು. ಧಮ್ಮ ಜಾಥವನ್ನು ಸನ್ನತಿ ಗ್ರಾಪಂ ಅಧ್ಯಕ್ಷೆ ಅನ್ನಪೂರ್ಣ ಹೊಸಮನಿ ಉದ್ಘಾಟಿಸುವರು. ಅಮೇರಿಕಾದ ಐಟಿಸಿಸಿ ಸಂಸ್ಥಾಪಕಿ ವಾಗ್ಮೋ ದೀಕ್ಷಿ ಸಾಮ್ರಾಟ ಅಶೋಕ ಪುಥಳಿಗೆ ಮಾಲಾರ್ಪಣೆ ಮಡುವರು, ಭಂತೆ ಧಮ್ಮಾನಂದ ಮಹಾಥೇರಾ, ಭಂತೆ ಮನೋರಕ್ಖಿತ ಥೇರಾ ಸೇರಿದಂತೆ 200ಕ್ಕೂ ಅಧಿಕ ಭಂತೆಜಿಗಳು ಸಾನಿಧ್ಯ ವಹಿಸುವರು.

ಅತಿಥಿಗಳಾಗಿ ರಾಹುಲ ಖರ್ಗೆ, ಟೋಪಣ್ಣ ಕೋಮಟೆ, ವಿಠ್ಠಲ ದೊಡ್ಡಮನಿ, ರವಿಕಿರಣ ಒಂಟಿ, ಡಿ.ಜಿ.ಸಾಗರ, ಮರಿಯಪ್ಪ ಹಳ್ಳಿ, ಅರ್ಜುನ್ ಭದ್ರೆ, ದೇವಿಂದ್ರ ಹೆಗಡೆ, ಸೂರ್ಯಕಾಂತ ನಿಂಬಾಳಕರ, ಬಸವರಾಜ ಬೆಣ್ಣೂರ, ಎಸ್.ಆರ್.ಕೊಲ್ಲೂರ ಹಲವರು ಪಾಲ್ಗೊಳ್ಳುವರು. ಸುಮಾರು 5 ಸಾವಿರ ಜನಸಂಖ್ಯೆ ಸೇರುವ ನಿರೀಕ್ಷೆಯಿದ್ದು, ಊಟ, ಕುಡಿಯುವ ನೀರು ಹಾಗೂ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. ,

ಈ ಸಂದರ್ಭದಲ್ಲಿ ಬಾಗಪ್ಪ ಕೊಲ್ಲೂರ, ಮೋನಪ್ಪ ನಡಗೇರಿ, ಬಾಬು ಬಂದಳ್ಳಿ ಶಿವಯೋಗಿ ದೇವಿದ್ರಕರ, ಶ್ರೀಮಮತ ಭಾವಿಮನಿ, ಸಂದೀಪ ಕಟ್ಟಿ ಇದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News