×
Ad

ಕಲಬುರಗಿ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಕಾರ್ಯದರ್ಶಿಗಳಾಗಿ ದಸ್ತಗಿರ್ ಅಹ್ಮದ್ ಸೇರಿ 12 ಮಂದಿ ನೇಮಕ

Update: 2025-03-15 17:31 IST

ದಸ್ತಗಿರ್ ಅಹ್ಮದ್

ಕಲಬುರಗಿ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ ಅಲ್ಪಸಂಖ್ಯಾತರ ವಿಭಾಗದ ಕಲಬುರಗಿ ಘಟಕದ ಸಾಮಾನ್ಯ ಕಾರ್ಯದರ್ಶಿಯಾಗಿ ದಸ್ತಗಿರ್ ಅಹ್ಮದ್ 12 ಕಾರ್ಯಕರ್ತರನ್ನು ನೇಮಕ ಮಾಡಿ ಕಲಬುರಗಿ ಪಕ್ಷದ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ನಯಿಮ್ ಖಾನ್ ಆದೇಶ ಹೊರಡಿಸಿದ್ದಾರೆ.

ಶೇಖ್ ಮಹೆಬೂಬ್, ಶೇಖ್ ಅಬ್ದುಲ್ ಸತ್ತಾರ ಕಮಲಾಪುರ, ಅಖೀಲ್ ಅಹ್ಮದ್ ಅನ್ಸಾರಿ, ಸೈಯದ್ ಅಜೀಮೊದ್ದೀನ್ ಖಾಜಿ, 27ನೇ ವಾರ್ಡ್ ನ ಶೇಖ್ ಹುಸೈನ್, ಮಕಸೂದ್ ಅಲಿ ಬಾಗಬಾನ್, ಮೊಹಮ್ಮದ್ ಸೊಹೇಲ್ ಅಹ್ಮದ್ ಕಾರಿಗರ್, 15ನೇ ವಾರ್ಡ್ ನ ದಸ್ತಗಿರ್ ಅಹ್ಮದ್, 9ನೇ ವಾರ್ಡ್ ನ ಶೇಖ್ ಖದೀರ್ ಅಹ್ಮದ್, ರಿಯಾಜ್ ಬಾಜೆ ಹಾಗೂ ಮೊಹಮ್ಮದ್ ಅಫರೋಜ್ ಅವರನ್ನು ಕಾಂಗ್ರೆಸ್ ಅಲ್ಪಸಂಖ್ಯಾತರ ಕಲಬುರಗಿ ಘಟಕದ ನೂತನ ಸಾಮಾನ್ಯ ಕಾರ್ಯದರ್ಶಿಗಳಾಗಿ ನೇಮಕ ಮಾಡಲಾಗಿದೆ.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ರಾಜ್ಯಾಧ್ಯಕ್ಷರಾದ ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಅವರ ಆದೇಶದಂತೆ ಕಲಬುರಗಿ ಘಟಕದ ಅಧ್ಯಕ್ಷರಾದ ನಯಿಮ್ ಖಾನ್ ಅವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News