×
Ad

ಕಲಬುರಗಿ| ನಂದೂರು ಸೆಕೆಂಡರಿ ಡಿಸ್ಟಲರಿ ಸೆಂಟರ್ ವೀಕ್ಷಿಸಿದ ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್

Update: 2025-06-19 21:03 IST

ಕಲಬುರಗಿ: ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಅವರು ಕಲಬುರಗಿ ತಾಲೂಕಿನ ನಂದೂರು ಕೈಗಾರಿಕೆ ಪ್ರದೇಶದಲ್ಲಿನ ಅಬಕಾರಿ ಇಲಾಖೆಯ ಸೆಕೆಂಡರಿ ಡಿಸ್ಟಲರಿ ಸೆಂಟರ್ ಮತ್ತು ಕೆಎಸ್‌ಬಿಸಿಎಲ್ ಡಿಪೋಗೆ ಭೇಟಿ ನೀಡಿ  ಕಾರ್ಯವೈಖರಿಯನ್ನು ಪರಿಶೀಲಿಸಿದರು.

ಈ ವೇಳೆ ಅಬಕಾರಿ ಉಪ ಆಯುಕ್ತ ಡಾ.ಸಂಗಣ್ಣಗೌಡ ಹೊಸಳ್ಳಿ ಅವರಿಂದ ಘಟಕದ ಕಾರ್ಯನಿರ್ವಹಣೆ ಮತ್ತು ರಾಜಸ್ವ ಸಂಗ್ರಹಣೆ ಅಂಶಗಳ ಕುರಿತು ಜಿಲ್ಲಾಧಿಕಾರಿಗಳು ಮಾಹಿತಿ ಪಡೆದುಕೊಂಡರು.

ಇದಕ್ಕೂ ಮೊದಲು ಭೂ ಪರಿವರ್ತನೆ ಕೋರಿ ಬಂದಿರುವ ಜಾಫರಾಬಾದ್‌ ಸರ್ವೆ ನಂ.58/4, ಇಟಗಾ ಸರ್ವೆ ನಂ.99/5, ಕೋಟನೂರ 'ಡಿ' ಸರ್ವೆ ನಂ.38/3, ಸಣ್ಣೂರ ಸರ್ವೆ ನಂ.132/3 ವೀಕ್ಷಿಸಿದರು. ಈ ವೇಳೆ ಕಲಬುರಗಿ ತಹಶೀಲ್ದಾರ್‌ ಆನಂದಶೀಲ ಕೆ, ಅಬಕಾರಿ ಇಲಾಖೆಯ ಅಧೀಕ್ಷಕರು, ಉಪ ಅಧೀಕ್ಷಕರು, ನಿರೀಕ್ಷಕರು ಹಾಗೂ ಇತರೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.   

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News