×
Ad

ಪೊಲೀಸರ ಕರ್ತವ್ಯಕ್ಕೆ ಅಡ್ಡಿ | 5ಕ್ಕೂ ಹೆಚ್ಚು ಜನರ ವಿರುದ್ಧ ಪ್ರಕಣ ದಾಖಲು : ಮೂವರ ಬಂಧನ

Update: 2025-02-14 21:18 IST

ಬಂಧಿತ ಆರೋಪಿಗಳು 

ಕಲಬುರಗಿ : ರಾಘವೇಂದ್ರ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕೊಲೆ ಪ್ರಕರಣದ ಆರೋಪಿಯ ಬಂಧನದ ಸಮಯದಲ್ಲಿ ಪೊಲೀಸರ ಕರ್ತವ್ಯಕ್ಕೆ ಅಡ್ಡಪಡಿಸಿದ ಐದಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಮೊಹ್ಮದಿ ಚೌಕ್ ನಿವಾಸಿ ರಸೂಲ್ ಅಹ್ಮದ್ (39), ಅಬ್ದುಲ್ ಸಮದ್ (33) ಹಾಗೂ ಯದುಲ್ಲಾ ಕಾಲೋನಿಯ ಸೋಷಿಯಲ್ ಮೀಡಿಯಾ ರಿಪೋರ್ಟರ್ ಮೊಸಿನ್ ಅಹ್ಮದ್ (28) ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ. ಇನ್ನೂ ಉಳಿದ ಆರೋಪಿಗಳ ಪತ್ತೆ ಹಚ್ಚುವ ಕಾರ್ಯ ಮುಂದುವರೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ನಗರದ ರಾಘವೇಂದ್ರ ಪೊಲೀಸ್ ಠಾಣೆ ವ್ಯಾಪ್ತಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರುಸ್ತುಮ್ ಕೃತ್ಯಕ್ಕೆ ಬಳಸಿದ ಚಾಕು, ಮೋಟರ್ ಸೈಕಲ್ ಜಪ್ತಿ ಮಾಡಲು ತೆರಳಿದ್ದಾಗ ಆರೋಪಿಯ ಸಂಬಂಧಿಕರು ಮತ್ತು ಸ್ನೇಹಿತರು ಪೊಲೀಸರ ಮೇಲೆ ಹಲ್ಲೆ ಮಾಡಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡೆಸಿರುವುದಾಗಿ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ದಕ್ಷಿಣ ಉಪ-ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಭೂತೆಗೌಡ ವಿ.ಎಸ್ ರವರ ಮಾರ್ಗದರ್ಶನದಲ್ಲಿ ರಾಘವೇಂದ್ರ ನಗರ ಪೊಲೀಸ್ ಠಾಣೆ ಪಿ.ಐ ಕುಬೇರ ಎಸ್.ರಾಯಮಾನೆ ರವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಮಲ್ಲಿಕಾರ್ಜುನ, ಮಲ್ಲನಗೌಡ, ಸಿಕ್ರೇಶ್ವರ, ರಾಜಕುಮಾರ, ಉಮೇಶ, ಮುಜಾಹಿದ, ಕರಣಕುಮಾರ, ಆರೇಶ, ಆತ್ಮಕುಮಾರ, ತುಕಾರಾಮ ಕರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News