×
Ad

ಕಲಬುರಗಿ | ಪ್ರತಿಭಟನೆಯಲ್ಲಿ ಕಲ್ಲು ತೂರಾಟ ಪ್ರಕರಣ; 8 ಮಂದಿಯ ಬಂಧನ

Update: 2024-12-10 15:56 IST

ಕಲಬುರಗಿ: ಯಡ್ರಾಮಿಯಲ್ಲಿ ಅಪ್ರಾಪ್ತೆಯ ಅತ್ಯಾಚಾರ ಖಂಡಿಸಿ ಸೋಮವಾರ ʼಸಕಲ ಹಿಂದೂ ಸಮಾಜʼ ಸಂಘಟನೆ ಮತ್ತು ಬಂಜಾರ ಸಮುದಾಯ ವತಿಯಿಂದ ನಡೆಸಿದ್ದ ಪ್ರತಿಭಟನೆಯಲ್ಲಿ ಕಿಡಿಗೇಡಿಗಳಿಂದ ಕಲ್ಲುತೂರಾಟ ಪ್ರಕರಣ ಸಂಬಂಧ ಎಂಟು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸ್ಟೇಷನ್ ಬಜಾರ್ ಪೊಲೀಸರು ತಿಳಿಸಿದ್ದಾರೆ.

ಪ್ರತಿಭಟನೆ ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪುತ್ತಿದ್ದಂತೆ ಕೆಲ ಕಿಡಿಗೇಡಿಗಳು ಅಲ್ಲಿನ ಅಂಗಡಿ ಮತ್ತು ರಸ್ತೆಯ ಬದಿಯಲ್ಲಿ ನಿಂತಿದ್ದ ವಾಹನಗಳ ಮೇಲೆ ಕಲ್ಲುತೂರಾಟ ನಡೆಸಿದ್ದರು. ಅಲ್ಲದೆ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದ ಬಳಿಯ ಆಟೋ ಚಾಲಕರಿಗೆ ನಿಂದನೆ ಮತ್ತು ಅವರ ವಾಹನಗಳನ್ನು ಕಿಡಿಗೇಡಿಗಳು ಜಖoಗೊಳಿಸಿದ್ದರು.

ಹಾನಿಗೊಳಗಾದ ವಾಹನಗಳ 10ಕ್ಕೂ ಹೆಚ್ಚು ಮಾಲಕರು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ದೂರಿನ ಮೇರೆಗೆ ಪೊಲೀಸರು 2 ಪ್ರಕರಣಗಳನ್ನು ದಾಖಲಿಸಿಕೊಂಡು ಇವರಿಗೆ 8 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನೂ ಹಲವರು ಇದರಲ್ಲಿ ಶಾಮೀಲಾಗಿದ್ದು, ತನಿಖೆ ನಡೆಸಿ ಅವರನ್ನು ಕೂಡ ಬಂಧಿಸಲಾಗುವುದು ಎಂದು ಸ್ಟೇಷನ್ ಬಜಾರ್ ಪೊಲೀಸರು ತಿಳಿಸಿದ್ದಾರೆ.

ಎರಡು ಪ್ರಕರಣ ದಾಖಲಿಸಿಕೊಂಡು, ಸಾಗರ ರಾಥೋಡ್, ಅಭಿಷೇಕ್ ರಾಥೋಡ್, ಶಂಕರ್ ರಾಥೋಡ್, ರಾಹುಲ್ ರಾಠೋಡ್, ಪ್ರದೀಪ್ ಪವಾರ್ ಮತ್ತಿಬ್ಬರು ಸೇರಿದಂತೆ 8 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ಕುರಿತಾಗಿ ಸ್ಟೇಶನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.

'ಪ್ರತಿಭಟನೆಯ ಕೊನೆಯಲ್ಲಿ ಕೆಲವು ಕಿಡಿಗೇಡಿಗಳು ವಾಹನಗಳ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ. ಈ ಘಟನೆಯಲ್ಲಿ ಯಾರೇ ಭಾಗಿಯಾದರೂ ಅವರ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಯಾರದಾದರೂ ವಾಹನಗಳಿಗೆ ಹಾನಿಯಾಗಿದ್ದರೆ ಅಂಥವರು ಸಮಿಪದ ಪೊಲೀಸ್ ಠಾಣೆಗೆ ದೂರು ನೀಡಬಹುದು.'

-ಡಾ. ಶರಣಪ್ಪ ಎಸ್. ಡಿ (ನಗರ ಪೊಲೀಸ್ ಆಯುಕ್ತರು, ಕಲಬುರಗಿ)

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News