×
Ad

ಒಳ ಮೀಸಲಾತಿ ಸಮೀಕ್ಷೆಯ ಅವಧಿ ವಿಸ್ತರಿಸಿ: ರಾಜು ವಾಡೇಕರ್

Update: 2025-05-08 20:56 IST

ಕಲಬುರಗಿ: ಪರಿಶಿಷ್ಟ ಜಾತಿ ಒಳ ಮೀಸಲಾತಿಗಾಗಿ ರಾಜ್ಯ ಸರಕಾರ ನಡೆಸುತ್ತಿರುವ ಜಾತಿ ಜನಗಣತಿ ಸಮೀಕ್ಷೆಯ ಅವಧಿಯನ್ನು ವಿಸ್ತರಿಸಬೇಕು ಎಂದು ಜಿಲ್ಲಾ ಮಾದಿಗ ಸಮಾಜದ ಮುಖಂಡ ರಾಜು ವಾಡೇಕರ್ ಆಗ್ರಹಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಒಳ ಮೀಸಲಾತಿಗಾಗಿ 30 ವರ್ಷಗಳಿಂದ ಮಾದಿಗ ಸಮಾಜದ ಸoಘಟನೆಗಳು ನಿರಂತರ ಹೋರಾಟ ಮಾಡಿರುವುದರ ಫಲವಾಗಿ ಇಂದು ರಾಜ್ಯ ಸರಕಾರ ಜಾತಿ ಗಣತಿಯ ದತ್ತಾಂಶಗಳನ್ನು ಸಂಗ್ರಹಿಸಿ ಸಮೀಕ್ಷೆ ನಡೆಸುತ್ತಿರುವುದು ಸ್ವಾಗತಾರ್ಹ. ಆದರೆ ಈ ಗಣತಿ ಮಾಡುವ ಶಿಕ್ಷಕರಿಗೆ ನಿಜವಾದ ಪ್ರದೇಶ ಮತ್ತು ಸಮುದಾಯದ ಜನರನ್ನು ಗುರುತಿಸಲು ಕಷ್ಟವಾಗುತ್ತಿದೆ. ಸಮೀಕ್ಷೆದಾರರಿಗೆ ನಗರಗಳಲ್ಲಿನ ಅವರಿಗೆ ಬರುವ ವಾರ್ಡ್ ಯಾವುದು? ಯಾವ ಮನೆಗಳು ಅವರಿಗೆ ಬರುತ್ತವೆ ಎನ್ನುವುದು ಅತಂತ್ರ ಸ್ಥಿತಿಯಲ್ಲಿದ್ದಾರೆ, ಹಾಗಾಗಿ ಕೊಟ್ಟಿರುವ ಅವಧಿಯಲ್ಲಿ ಅವರು ಸಮೀಕ್ಷೆ ಮುಗಿಸುವುದು ಕಷ್ಟವಾಗುತ್ತದೆ. ಕೂಡಲೇ ದಿನಾಂಕವನ್ನು ವಿಸ್ತರಿಸಬೇಕು ಎಂದು ಆಗ್ರಹಿಸಿದರು.

ಗಣತಿ ವೇಳೆಯಲ್ಲಿ ಮಾದಿಗ ಸಮುದಾಯದ ಜನರು ಕಾಲಂ ನಂಬರ್ 22 ದಲ್ಲಿರುವ ಮಾದರ ಹೆಸರನ್ನು ಉಲ್ಲೇಖಿಸದೆ, ಕ್ರಮ ಸಂಖ್ಯೆ 61 ದಲ್ಲಿರುವ ಮಾದಿಗ ಎಂದೇ ಬರೆಯಿಸಬೇಕು, ರಾಜ್ಯಾದ್ಯಂತ ಇದನ್ನೇ ಬರುತ್ತಿರುವುದರಿಂದ ಎಲ್ಲರೂ ಮಾದಿಗ ಎಂಬುವುದನ್ನೇ ನೋಂದಾಯಿಸಬೇಕು ಎಂದು ಸಮುದಾಯದ ಜನರಿಗೆ ಮನವಿ ಮಾಡಿದರು.

ಮುಖಂಡ ದಶರಥ ಕಲಗುರ್ತಿ ಮಾತನಾಡಿ, ಜಾತಿಗಣತಿ ಕೆಲವೆಡೆ ನಿಧಾನಗತಿಯಲ್ಲಿ ಸಾಗುತ್ತಿದೆ, ಇದರಿಂದ ಕೆಲವು ಕಡೆಗಳಲ್ಲಿ ದುರುಪಯೋಗ ಆಗಿರುವುದನ್ನು ನಮ್ಮ ಗಮನಕ್ಕೆ ಬಂದಿದೆ. ಅಲ್ಲದೆ ಅಪ್ಲಿಕೇಶನ್(ಆಪ್) ನಲ್ಲಿ ತಾಂತ್ರಿಕ ದೋಷಗಳು ಕಂಡುಬರುತ್ತಿವೆ, ಶಿಕ್ಷಕರಿಗೆ ಪ್ರತಿಯೊಂದು ಮಾದಿಗ ಸಮುದಾಯದ ಮನೆಗಳಿಗೆ ಭೇಟಿ ನೀಡುತ್ತಿಲ್ಲ, ಅವರ ಜೊತೆ ಅಂಗನವಾಡಿ ಕಾರ್ಯಕರ್ತೆಯರನ್ನು ಭಾಗವಹಿಸಲು ಕೂಡಲೇ ಜಿಲ್ಲಾಧಿಕಾರಿಗಳು ಅನುವು ಮಾಡಿ ಕೊಡಬೇಕೆಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ರಮೇಶ್ ವಾಡೇಕರ್, ರಂಜಿತ್ ಮೂಲಿಮನಿ, ಮಂಜುನಾಥ್ ನಾಲವಾರಕರ್, ಶ್ರೀನಿವಾಸ್, ಎಚ್. ನಾಗೇಶ್ ಸೇರಿದರೆ ಇನ್ನಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News