×
Ad

ಕಲಬುರಗಿ | ಕರ್ನಾಟಕ ಯುವ ಶಕ್ತಿ ರೈತರ ಮಕ್ಕಳ ಮಹಾಶಕ್ತಿ ಸಂಘಟನೆಯ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

Update: 2025-12-16 14:30 IST

ಕಲಬುರಗಿ: ನಗರದ ಕನ್ನಡ ಭವನದಲ್ಲಿ ಕರ್ನಾಟಕ ಯುವ ಶಕ್ತಿ ರೈತರ ಮಕ್ಕಳ ಮಹಾಶಕ್ತಿ ಸಂಘಟನೆಯ ಪದಗ್ರಹಣ ಸಮಾರಂಭವನ್ನು ಮಣ್ಣೂರ ಆಸ್ಪತ್ರೆಯ ಮುಖ್ಯಸ್ಥ ಡಾ.ಫಾರೂಕ್ ಮಣ್ಣೂರ ಅವರು ಉದ್ಘಾಟಿಸಿದರು.

ಧ್ಯಾನರತ್ನ ಚಿದಾನಂದ ಸ್ವಾಮೀಜಿ, ಸಂಗಮೇಶ ಸ್ವಾಮೀಜಿ, ಎಂ.ಕೆ.ಮರತೂರಕರ್, ವಕೀಲ ಶಿವಕುಮಾರ ಹುಜರಾತಿ, ಕಲ್ಯಾಣ ಕರ್ನಾಟಕ ಮುಖ್ಯ ಸಂಚಾಲಕ ಅಂಬರೀಷ್ ಜೋಗಿ, ಕರ್ನಾಟಕ ಯುವ ಶಕ್ತಿ ಸಂಘಟನೆಯ ರಾಜ್ಯಾಧ್ಯಕ್ಷ ಅವ್ವಣಗೌಡ ಎನ್ ಪಾಟೀಲ್, ಜಿಲ್ಲಾ ಅಧ್ಯಕ್ಷ ಶಿವಕುಮಾರ ಸಾಗರ್, ಮಹಿಳಾ ಜಿಲ್ಲಾ ಅಧ್ಯಕ್ಷೆ ಅನುರಾಧಾ ಟಿ.ಕಟ್ಟಿಮನಿ, ಮತ್ತಿತರರು ವೇದಿಕೆಯ ಮೇಲಿದ್ದರು.

ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಕಾರ್ಯದರ್ಶಿ ನಾಗರತ್ನ ಕಡಿಮನಿ, ಜಿಲ್ಲಾ ಗೌರವಾಧ್ಯಕ್ಷ ನೀಲಕಂಠರಾವ ಬಿರಾದಾರ, ಜೇವರ್ಗಿ ತಾಲೂಕು ಅಧ್ಯಕ್ಷ ಬಿ.ಸಿ.ಪಾಟೀಲ್, ಯಡ್ರಾಮಿ ತಾಲೂಕು ಅಧ್ಯಕ್ಷ ಭಗವಂತರಾಯ ಮುದಗಲ್, ಕಲ್ಯಾಣ ಕರ್ನಾಟಕ ಸಂಘಟನಾ ಕಾರ್ಯದರ್ಶಿ ನಯುಮ್ ಪಟೇಲ್ ಶಾಹಾಪೂರ, ಚಿಂಚೋಳಿ ತಾಲೂಕು ಮಹಿಳಾ ಅಧ್ಯಕ್ಷೆ ರತ್ನಮ್ಮ ಪಾಟೀಲ್ ಕಾಳಗಿ, ಪ್ರಿಯಾಂಕಾ ಪಾಟೀಲ್, ದಕ್ಷಿಣ ಮತಕ್ಷೇತ್ರದ ಅಧ್ಯಕ್ಷ ಹುಲಿಕಂಠ ಹೇರೂರ, ಅಫಜಲಪೂರ ಸಾಮಾಜಿಕ ಜಾಲತಾಣದ ಅಧ್ಯಕ್ಷ ಆನಂದ್ ಪಾಟೀಲ್, ಜಿಲ್ಲಾ ಸಹ ಸಂಚಾಲಕ ಶರಣು ನೀಲೂರ್, ತಾಲೂಕು ಉಪಾಧ್ಯಕ್ಷ ನಿಂಗು ಕೇರಳ್ಳಿ, ಜೇವರ್ಗಿ ಉಪಾಧ್ಯಕ್ಷ ಹಣಮಂತರಾಯ ಇದ್ದರು.

ಕಾರ್ಯಕ್ರಮದಲ್ಲಿ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಪದಗ್ರಹಣ ಮಾಡಿದರು. ಇದೇ ವೇಳೆಯಲ್ಲಿ ಸಂಘಟನೆಯ ಹೊಬಳಿ ಮತ್ತು ಗ್ರಾಮ ಘಟಕದ ಅಧ್ಯಕ್ಷರು, ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News