ಕಲಬುರಗಿಯ ಐತಿಹಾಸಿಕ ತಾಣಗಳಿಗೆ ಘಾನಾ ಪ್ರವಾಸಿಗರ ಭೇಟಿ
ಬುದ್ಧ ವಿಹಾರ, ಬಹಮನಿ ಕೋಟೆ ವೀಕ್ಷಣೆ
Update: 2026-08-13 20:56 IST
ಕಲಬುರಗಿ: ಘಾನಾ ದೇಶದ ಪ್ರವಾಸಿಗರ ತಂಡವೊಂದು ಗುರುವಾರ ಕಲಬುರಗಿ ನಗರದ ಪ್ರಮುಖ ಪ್ರವಾಸಿ ತಾಣಗಳಾದ ಬುದ್ಧ ವಿಹಾರ ಹಾಗೂ ಬಹಮನಿ ಕೋಟೆಗೆ ಭೇಟಿ ನೀಡಿ, ಅಲ್ಲಿನ ಐತಿಹಾಸಿಕ ಮತ್ತು ಸಾಂಸ್ಕೃತಿಕ ವೈಶಿಷ್ಟ್ಯಗಳನ್ನು ವೀಕ್ಷಿಸಿತು.
ಪ್ರವಾಸಿಗರು ಬುದ್ಧ ವಿಹಾರ ಹಾಗೂ ಬಹಮನಿ ಕೋಟೆಯ ವಾಸ್ತುಶಿಲ್ಪ, ಐತಿಹಾಸಿಕ ಹಿನ್ನೆಲೆ ಹಾಗೂ ವಿಶೇಷತೆಗಳನ್ನು ಕುತೂಹಲದಿಂದ ವೀಕ್ಷಿಸಿದರು. ಈ ಸಂದರ್ಭದಲ್ಲಿ ಹವ್ಯಾಸಿ ಪ್ರವಾಸಿ ಮಾರ್ಗದರ್ಶಿಗಳಾದ ನಾರಾಯಣ ಎಂ. ಜೋಶಿ ಹಾಗೂ ಬಿ.ಎಂ. ರಾವೂರ ಅವರು ಪ್ರವಾಸಿಗರಿಗೆ ಕಲಬುರಗಿ ನಗರದ ಐತಿಹಾಸಿಕ ಹಿನ್ನೆಲೆ, ಪ್ರಮುಖ ಪ್ರವಾಸಿ ತಾಣಗಳು ಹಾಗೂ ನಗರದ ಸಾಂಸ್ಕೃತಿಕ ವೈಶಿಷ್ಟ್ಯಗಳ ಕುರಿತು ಸಂಕ್ಷಿಪ್ತ ಮಾಹಿತಿಯನ್ನು ನೀಡಿದರು.
ವಿದೇಶಿ ಪ್ರವಾಸಿಗರು ಕಲಬುರಗಿಯ ಐತಿಹಾಸಿಕ ಸ್ಮಾರಕಗಳು ಹಾಗೂ ಬುದ್ಧ ವಿಹಾರದ ವೈಶಿಷ್ಟ್ಯಗಳನ್ನು ಮೆಚ್ಚುಗೆ ವ್ಯಕ್ತಪಡಿಸಿ, ಸ್ಥಳೀಯ ಪ್ರವಾಸಿ ತಾಣಗಳ ಕುರಿತು ಮಾಹಿತಿ ಪಡೆದುಕೊಂಡರು.