×
Ad

ಸರಕಾರಿ ನೌಕರರ ಸಂಘದ ಚುನಾವಣೆ : ಸತೀಶ ಷಣ್ಮುಖ ಅವಿರೋಧವಾಗಿ ಆಯ್ಕೆ

Update: 2024-11-07 19:55 IST

ಕಲಬುರಗಿ : ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಚುನಾವಣೆ 2024-2029 ರ ಅವಧಿಗೆ ಕಲಬುರಗಿ ಜಿಲ್ಲಾ ಸರಕಾರಿ ನೌಕರರ ಸಂಘ ತಾಲೂಕು ಘಟಕ ಆಳಂದನ ನೂತನ ಅಧ್ಯಕ್ಷರಾಗಿ ಸತೀಶ ಷಣ್ಮುಖ ಅವರು ಆಯ್ಕೆಯಾಗಿದ್ದಾರೆ.

ಅದರಂತೆಯೇ ಕೋಶಾಧ್ಯಕ್ಷರಾಗಿ ಬಸವರಾಜ ಕೆ.ಚಿನಗೇರಾ ಹಾಗೂ ರಾಜ್ಯ ಪರಿಷತ್ ಸದಸ್ಯರಾಗಿ ನಾಗೇಂದ್ರ ಗಾಡೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇವರ ಆಯ್ಕೆಗೆ ಕರ್ನಾಟಕ ರಾಜ್ಯ ಸರಕಾರಿ ಎನ್.ಪಿ.ಎಸ್ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶಾಂತಾರಾಮ ತೇಜ್, ಪ್ರಧಾನ ಕಾರ್ಯದರ್ಶಿ ಸಿದ್ದಪ್ಪ ಸಂಗಣ್ಣ, ರಾಜ್ಯ ಉಪಾಧ್ಯಕ್ಷರಾದ ಚಂದ್ರಕಾಂತ ತಳವಾರ, ಕೊಶಾಧ್ಯಕ್ಷರಾದ ವಿಜಯ ಟಿ, ಕಲಬುರಗಿ ಜಿಲ್ಲಾ ಎನ್ ಪಿ ಎಸ್ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾದ ಧರ್ಮರಾಜ ಜವಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವನಾಥ ಶಿಂದೆ, ಜಿಲ್ಲಾ ಗೌರವಾಧ್ಯಕ್ಷರಾದ ಅಶೋಕ ಸೊನ್ನ, ಜಿಲ್ಲಾ ಉಪಾಧ್ಯಕ್ಷರಾದ ಮಹೇಶ ನಾಗಮಾರಪಳ್ಳಿ ರಾಚಯ್ಯ ಸ್ವಾಮಿ ಶ್ರೀನಿವಾಸ ಗುತ್ತೇದಾರ, ಲಲಿತಾ ಪಾಟೀಲ, ಕೊಶಾಧ್ಯಕ್ಷರಾದ ಶರಣಪ್ಪ ಶ್ರೀ ಗಿರಿ, ಕಾನೂನು ಸಲಹೆಗಾರರಾದ ಅಣವೀರಪ್ಪ ಯಾಕಾಪುರ, ಜಗದೀಶ ಮೂಲಗೆ , ಗುರುಶರಣ ನಾಗಶೆಟ್ಟಿ, ಸುನೀಲ್ ದತ್ತ ಡಾಂಗೆ, ಕಲಬುರಗಿ ಉತ್ತರ ವಲಯದ ಅಧ್ಯಕ್ಷರಾದ ರೇಣುಕಾ ಎನ್ ಪ್ರಧಾನ ಕಾರ್ಯದರ್ಶಿ ಪಡೆಯಪ್ಪ, ಜಿಲ್ಲಾ ಸಮಸ್ತ ಎನ್ ಪಿ ಎಸ್ ನೌಕರರ ಸಂಘ ಹಾಗೂ ಕಲಬುರಗಿ ಜಿಲ್ಲಾ ಎಲ್ಲಾ ತಾಲೂಕು ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News