ಕಲಬುರಗಿ | ಪ್ರೊ.ಸುಬ್ಬಯ್ಯ ನೀಲಾ ಅವರ ಕಲಾಕೃತಿಗೆ ಎಂ ಹರಿತಾ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
Update: 2025-02-22 15:33 IST
ಕಲಬುರಗಿ : ಖ್ಯಾತ ಕಲಾವಿದ ಮತ್ತು ಶರಣಬಸವ ವಿಶ್ವವಿದ್ಯಾಲಯದ ಲಲಿತಕಲಾ ವಿಭಾಗದ ಚೇರಪರ್ಸನ್ ಪ್ರೊ.ಸುಬ್ಬಯ್ಯ ನೀಲಾ ಅವರಿಗೆ ಹೈದರಾಬಾದ್ ಆರ್ಟ್ ಸೊಸೈಟಿ ಆಯೋಜಿಸಿದ್ದ 84ನೇ ಅಖಿಲ ಭಾರತ ವಾರ್ಷಿಕ ಕಲಾ ಪ್ರದರ್ಶನ 2025 ರಲ್ಲಿ ಪ್ರತಿಷ್ಠಿತ ಶ್ರೀಮತಿ ಎಂ ಹರಿತಾ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರೊ.ನೀಲಾ ಅವರ "ಫೆಸ್ಟಿವಲ್" ಎಂಬ ವರ್ಣಚಿತ್ರವನ್ನು ವಾರ್ಷಿಕ ಕಲಾ ಪ್ರದರ್ಶನದಲ್ಲಿ ಅತ್ಯುತ್ತಮ ಚಿತ್ರಕಲೆ ಎಂದು ಆಯ್ಕೆ ಮಾಡಿ, ಶ್ರೀಮತಿ ಎಂ ಹರಿತಾ ಸ್ಮಾರಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಹೈದರಾಬಾದ್ ನಲ್ಲಿ ನಡೆದ ಈ ಸಮಾರಂಭ ತೆಲಂಗಾಣ ರಾಜ್ಯಪಾಲ ಜಿಷ್ಣು ದೇವ್ ವರ್ಮಾ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.