ಕಲಬುರಗಿ | ನಕಲಿ ಎಸೆಸೆಲ್ಸಿ ಅಂಕಪಟ್ಟಿ ನೀಡಿ ಗ್ರೂಪ್ ‘ಡಿ’ ಹುದ್ದೆ ಪಡೆದ ಯುವಕನ ವಿರುದ್ಧ ಪ್ರಕರಣ ದಾಖಲು
ಬೀರಪ್ಪ
ಕಲಬುರಗಿ: ಡಿ.21, 2023 ರಂದು ಕಲಬುರಗಿ ವೃತ್ತ ವ್ಯಾಪ್ತಿಯ ಕಲ್ಯಾಣ ಕರ್ನಾಟಕ ಮತ್ತು ಉಳಿಕೆ ಮೂಲ ವೃಂದದ 23 ಅರಣ್ಯ ವೀಕ್ಷಕ ಗ್ರೂಪ "ಡಿ' ವೃಂದದ ಹುದ್ದೆಗಳ ನೇರ ನೇಮಕಾತಿಯಲ್ಲಿ ನಕಲಿ ಅಂಕಪಟ್ಟಿ ಸೃಷ್ಟಿಸಿ ಹುದ್ದೆ ಪಡೆದಿರುವ ಅರೋಪಿಯ ವಿರುದ್ಧ ಇಲ್ಲಿನ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿ ಪ್ರಕರಣ ದಾಖಲಿಸಿದ್ದಾರೆ.
ಕಲಬುರಗಿಯ ಕಡಣಿ ಗ್ರಾಮದ ಬೀರಪ್ಪ (26) ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.
ಡಿ.21, 2023 ರಂದು ಆನ್ಲೈನ್ ಮೂಲಕ ಅರ್ಜಿ ಹಾಕಿದ್ದ ಬೀರಪ್ಪ, 2014ರ ಏಪ್ರಿಲ್ನಲ್ಲಿ ಎಸೆಸೆಲ್ಸಿಯಲ್ಲಿ 605 ಅಂಕ ಪಡೆದು ತೇರ್ಗಡೆಯಾಗಿದ್ದಾಗಿ ಅಂಕಪಟ್ಟಿ ಸಲ್ಲಿಸಿದ್ದು, ಅಂಕಪಟ್ಟಿಯ ನೈಜತೆ ಪರಿಶೀಲಿಸಿದಾಗ ಬೀರಪ್ಪನ ಮೂಲ ಅಂಕಪಟ್ಟಿಯಲ್ಲಿ 316 ಅಂಕಗಳಿಸಿರುವುದಾಗಿ ಪರೀಕ್ಷಾ ಮತ್ತು ಮೌಲ್ಯನಿರ್ಣಯ ಮಂಡಳಿ ವರದಿ ನೀಡಿರುವುದರಿಂದ ಪ್ರಕರಣ ಬೆಳಕಿಗೆ ಬಂದಿದೆ.
ಈ ಕುರಿತು ಸ್ಟೇಷನ್ ಬಜಾರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.