ಕಲಬುರಗಿ | ‘ಆಫ್ಟರ್ ಪೆಟ್ರೋಲ್ ಪ್ರೈಸ್’ ಕಲಾಕೃತಿಗೆ ಅಯಾಜುದ್ದೀನ್ ಪಟೇಲ್‌ಗೆ ಪ್ರಶಸ್ತಿ
Update: 2026-01-23 23:03 IST
ಕಲಬುರಗಿ, ಜ.23: ಹೈದರಾಬಾದ್ ಆರ್ಟ್ ಸೊಸೈಟಿಯ 85ನೇ ವಾರ್ಷಿಕ ಅಖಿಲ ಭಾರತ ಕಲಾ ಪ್ರದರ್ಶನ-2026ರ ನಿಮಿತ್ತ ಸೊಸೈಟಿ ಕೊಡುವ ಎಕ್ಸಲೆನ್ಸ್ ಪ್ರಶಸ್ತಿಯನ್ನು ಕಲಬುರಗಿ ಕಲಾವಿದ ಮುಹಮ್ಮದ್ ಅಯಾಜುದ್ದೀನ್ ಪಟೇಲ್ ಅವರು ಸ್ವೀಕರಿಸಿದರು.
ಹೈದರಾಬಾದ್‌ನ ಗಾಂಧಿ ಸೆಂಟಿನರಿ ಹಾಲ್‌ನ ಪ್ರದರ್ಶನ ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ ಕಾರ್ಯಕ್ರಮದಲ್ಲಿ ಜಮ್ಮು ಮತ್ತು ಕಾಶ್ಮೀರದ ಮಾಜಿ ಪೊಲೀಸ್ ಮಹಾನಿರ್ದೇಶಕ ಎಸ್. ಗೋಪಾಲ್ ರೆಡ್ಡಿ ಅವರು 25,000 ರೂ. ನಗದು ಬಹುಮಾನ ಜೊತೆಗೆ ಪ್ರಶಸ್ತಿ ಪ್ರಮಾಣಪತ್ರವನ್ನು ಅಯಾಜುದ್ದೀನ್ ಪಟೇಲ್ ಅವರಿಗೆ ಪ್ರದಾನ ಮಾಡಿದರು.
‘ಆಫ್ಟರ್ ಪೆಟ್ರೋಲ್ ಪ್ರೈಸ್’ ಎಂಬ ಶೀರ್ಷಿಕೆಯ ಅಡಿಯಲ್ಲಿ ರಚಿಸಲಾದ ಕಲಾಕೃತಿಗೆ ಈ ಪ್ರಶಸ್ತಿ ಬಂದಿದೆ. ಈ ಸಂದರ್ಭದಲ್ಲಿ ಹೈದರಾಬಾದ್ ಆರ್ಟ್ ಸೊಸೈಟಿಯ ಅಧ್ಯಕ್ಷರಾದ ವಿ.ರಾಮಣ ರೆಡ್ಡಿ, ಕಾರ್ಯದರ್ಶಿ ಜಗತಿ ವೆಂಕಟೇಶ್ವರಲು ಹಾಗೂ ಪ್ರದರ್ಶನ ಸಮಿತಿಯ ಹಲವು ಸದಸ್ಯರು ಉಪಸ್ಥಿತರಿದ್ದರು.