×
Ad

ಕಲಬುರಗಿ | ಜ.24 ರಂದು ʼಪುಸ್ತಕ ಪರಿಚಯʼ ಕಾರ್ಯಕ್ರಮ: ಅಪ್ಪಾರಾವ್‌ ಅಕ್ಕೋಣೆ

Update: 2026-01-23 19:43 IST

ಕಲಬುರಗಿ: ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘ ಕಲಬುರಗಿ ವತಿಯಿಂದ ನಾಳೆ ಜ.24 ರಂದು ಸಂಜೆ 5ಗಂಟೆಗೆ "ಪುಸ್ತಕ ಪರಿಚಯ" ಕಾರ್ಯಕ್ರಮವು ಸಂಘದ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಅಪ್ಪಾರಾವ್‌ ಅಕ್ಕೋಣೆ ಅವರು ತಿಳಿಸಿದ್ದಾರೆ.

ಹಿರಿಯ ಸಾಹಿತಿ ಶ್ರೀನಿವಾಸ ಜಾಲವಾದಿ ಅವರು ರಚಿಸಿದ "ಮಿಸ್ಸಳ ಭಾಜಿ ಮತ್ತು ಇತರ ಲಲಿತ ಪ್ರಬಂಧಗಳು"ಎಂಬ ಪ್ರಬಂಧ ಸಂಕಲನ ಕುರಿತು ಹೈದರಾಬಾದಿನ ಉಸ್ಮಾನಿಯ ವಿಶ್ವವಿದ್ಯಾಲಯದ ಕಲಾ ನಿಕಾಯದ ಡೀನರಾದ ಪ್ರೊ.ಲಿಂಗಪ್ಪ ಗೋನಾಲರು ಅವಲೋಕನ ಮಾಡುವರು. ಹಿರಿಯ ಸಾಹಿತಿಗಳಾದ ಡಾ.ಜಯದೇವಿ ಗಾಯಕವಾಡ, ಡಾ.ಚಿ.ಸಿ.ನಿಂಗಣ್ಣ ಮತ್ತು ಪ್ರೊ.ಶಾಂತಲಿಂಗಪ್ಪ ಪಾಟೀಲ ಅವರು ಪುಸ್ತಕ ಕುರಿತು ಪ್ರತಿಕ್ರಿಯೆ ನೀಡಲಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘದ ಅಧ್ಯಕ್ಷ ಅಪ್ಪಾರಾವ ಅಕ್ಕೋಣೆ ಅವರು ಅಧ್ಯಕ್ಷತೆ ವಹಿಸುವರು, ಸದರಿ ಸಂಘದ ಉಪಾಧ್ಯಕ್ಷರಾದ ಡಾ.ಸ್ವಾಮಿರಾವ ಕುಲಕರ್ಣಿಯವರು ಮತ್ತು ಲೇಖಕರಾದ ಶ್ರೀನಿವಾಸ ಜಾಲವಾದಿಯವರು ಉಪಸ್ಥಿತರಿರುವರು.  ಸಾಹಿತ್ಯದ ಆಸಕ್ತರು, ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು, ಆಜೀವ ಸದಸ್ಯರು ಹಾಗೂ ಸಾಹಿತಿಗಳು ಉಪಸ್ಥಿತರಿರಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News