ಕಲಬುರಗಿ| ಅಲ್ ಬದರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಲೋಕಾರ್ಪಣೆ
Update: 2025-12-07 23:43 IST
ಕಲಬುರಗಿ: ನಗರದ ಎಂ.ಜಿ.ರೋಡ್‍ನ ಬಡೇಪುರದ ಮನ್ಸಬದಾರ ಲೇಔಟ್‍ನಲ್ಲಿ ನಿರ್ಮಿಸಿರುವ ಅಲ್-ಬದರ್ ಮಲ್ಟಿಸ್ಪೇಷಾಲಿಟಿ ಮತ್ತು ಡೆಂಟಲ್ ಆಸ್ಪತ್ರೆಯನ್ನು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಶರಣಪ್ರಕಾಶ್ ಪಾಟೀಲ್ ಉದ್ಘಾಟಿಸಿದರು.
ಕಲಬುರಗಿ ಲೋಕಸಭಾ ಸದಸ್ಯರಾದ ರಾಧಾಕೃಷ್ಣ ದೊಡ್ಡಮನಿ, ಹಝರತ್ ಖ್ವಾಜಾ ಬಂದಾನವಾಜ್ ದರ್ಗಾದ ಹಫೀಜ್ ಸೈಯದ್ ಮುಹಮ್ಮದ್ ಅಲಿ ಅಲ್ ಹುಸೈನಿ, ಅಲ್ ಬದರ್ ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ.ಎ. ಮುಜೀಬ್, ಸಚಿವ ಶರಣಬಸಪ್ಪ ದರ್ಶನಾಪೂರ, ಕೆಕೆಆರ್‍ಡಿಬಿ ಅಧ್ಯಕ್ಷ ಡಾ.ಅಜಯ್ ಸಿಂಗ್, ಶಾಸಕರಾದ ಬಿ.ಆರ್.ಪಾಟೀಲ್, ಅಲ್ಲಮಪ್ರಭು ಪಾಟೀಲ್, ಕನೀಜ್ ಫಾತಿಮಾ, ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ್ ಪಾಟೀಲ್, ಶಶೀಲ ನಮೋಶಿ, ಫರಾಜ್ ಉಲ್ ಇಸ್ಲಾಂ, ಚಂದು ಪಾಟೀಲ್, ಟ್ರಸ್ಟಿಗಳಾದ ಎಂ.ಎ.ನಜೀಬ್, ಸೈಯದ್ ಸನಾವುಲ್ಲಾ, ಡಾ.ಸೈಯದ್ ಜಕಾವುಲ್ಲಾ, ಡಾ.ಅರ್ಷದ್ ಹುಸೇನ್, ಎಂ.ಅವನ್ ಮುಜೀಬ್, ಖಲೀಲ್ ಮಸೂದ್ ಅಲಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.