×
Ad

ಕಲಬುರಗಿ | ಪುರಸಭೆ ಚುನಾವಣೆಯಲ್ಲಿ ಪೊಲೀಸ್ ಅಧಿಕಾರಿಯ ಬಲಪ್ರಯೋಗ ಆರೋಪ : ಅಮಾನತಿಗೆ ಆಗ್ರಹ

Update: 2025-02-13 19:31 IST

ಕಲಬುರಗಿ : ಜೇವರ್ಗಿ ಪುರಸಭೆ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರ ಮೇಲೆ ಹೆಚ್ಚುವರಿ ಎಸ್.ಪಿ ಅವರು ಬಲಪ್ರಯೋಗ ಮಾಡಿ ಮತದಾನಕ್ಕೆ ಅಡ್ಡಪಡಿಸಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಎಸ್.ಪಿ ಕಚೇರಿ ಮುಂದೆ ಧರಣಿ ನಡೆಸಿ ಅಮಾನತಿಗೆ ಆಗ್ರಹಿಸಿದರು.

ಗುರುವಾರ ನಗರದ ಎಸ್.ಪಿ ಕಚೇರಿ ಮುಂದೆ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ್ ಮತ್ತಿಮುಡ್, ಬಿಜೆಪಿ ನಗರಾಧ್ಯಕ್ಷ ಚಂದು ಪಾಟೀಲ್, ಶಿವರಾಜ್ ಪಾಟೀಲ್ ರದ್ದೇವಾಡ್ಗಿ, ಅಮರನಾಥ್ ಪಾಟೀಲ್, ಹರ್ಷಾನಂದ ಗುತ್ತೇದಾರ, ಶೋಭಾ ಭರಣಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ಹೆಚ್ಚುವರಿ ಎಸ್.ಪಿ ಮಹೇಶ್ ಮೆಘಣ್ಣ ಅವರು ಬುಧವಾರ ಜೇವರ್ಗಿ ಪುರಸಭೆ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷದ ಇಬ್ಬರು ಸದಸ್ಯರು ಬಿಜೆಪಿಗೆ ಬೆಂಬಲಿಸಿ ಮತದಾನ ಮಾಡಲು ಮುಂದಾದಾಗ ಅವರನ್ನು ಬಲವಂತವಾಗಿ ಕಿಡ್ನ್ಯಾಪ್ ಮಾಡಿದರು ಎಂದು ಆರೋಪಿಸಿದರು.

ಸಾರ್ವಜನಿಕರಿಗೆ ಭದ್ರತೆ ನೀಡಬೇಕಿದ್ದ ಪೊಲೀಸ್ ಅಧಿಕಾರಿಗಳ ಈ ವರ್ತನೆ ಪೊಲೀಸ್ ಇಲಾಖೆಯ ಮೇಲೆ ನಂಬಿಕೆ ಕಳೆದುಕೊಳ್ಳುವಂತೆ ಮಾಡಿದ ಹೆಚ್ಚುವರಿ ಎಸ್.ಪಿಯನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News