×
Ad

ಕಲಬುರಗಿ | ಒಂದು ಶಿಕ್ಷಣ ಸಂಸ್ಥೆಗೆ ಅದರ ಹಳೆಯ ವಿದ್ಯಾರ್ಥಿಗಳೇ ಜೀವಾಳ: ಶಶೀಲ್ ನಮೋಶಿ

Update: 2025-06-10 09:32 IST

ಕಲಬುರಗಿ: ಒಂದು ಶಿಕ್ಷಣ ಸಂಸ್ಥೆಗೆ ಅದರಲ್ಲಿ ಶಿಕ್ಷಣ ಪಡೆದು ಜೀವನದಲ್ಲಿ ಉನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳು ಸಹ ಅದರ ಜೀವಾಳವಾಗಿರುತ್ತಾರೆ ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶಶೀಲ್ ನಮೋಶಿ ಹೇಳಿದರು.

ಅವರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪೂಜ್ಯ ದೊಡ್ಡಪ್ಪ ಅಪ್ಪ ಇಂಜಿನಯರಿಂಗ್‌ ಕಾಲೇಜು ಹಾಗೂ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಮುಖ್ಯ ಕಚೇರಿ ಹೊಂದಿರುವ ಅಲ್ಫಾಲಿಯೋ ಕಂಪನಿಯ ಜೊತೆ ಒಪ್ಪಂದ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಮ್ಮ ಸಂಸ್ಥೆಯ ಪಿಡಿಎ ಇಂಜಿನಿಯರಿಂಗ್‌  ಕಾಲೇಜಿನಲ್ಲಿ ಅಭ್ಯಾಸ ಮಾಡಿ ಇಂದು ವಿದೇಶಗಳಲ್ಲಿ ಅನೇಕ ಸಾಧನೆ ಮಾಡಿ ಜೀವನ ನಡೆಸುತ್ತಿರುವ ಅನೇಕ ವಿದ್ಯಾರ್ಥಿಗಳನ್ನು ನಾವು ಕಾಣಬಹುದು. ಇಂತಹ ಸಾಧನಾ ಶಿಖರವೇರಿದ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದ 4 ವಿದ್ಯಾರ್ಥಿಗಳು ಇಂದು ತಾವು ಅಭ್ಯಾಸ ಮಾಡಿದ ಈ ಕಾಲೇಜಿನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕಾಲೇಜಿನಲ್ಲಿಯೆ ತಮ್ಮ ಸ್ಟ್ರಾರ್ಟ್ಅಪ್ ಕಂಪನಿ ಪ್ರಾರಂಭಿಸಿರುವದು ಪ್ರಶಂಸನಿಯ ಎಂದರು.

ಅಲ್ಪಾಲಿಯೋ ಕಂಪನಿಯ ಸ್ಥಾಪಕರು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಚಂದನ್‌ ಮಿಸ್ಕೀನ್ ಮಾತನಾಡಿ, ನಮ್ಮ ಅಲ್ಫಾಲಿಯೋ ಕಂಪನಿಯು 2021 ರಲ್ಲಿ ಆಸ್ಟ್ರೇಲಿಯಾದ ಸಿಡ್ನಿ ಹಾಗೂ ಭಾರತದ ಹೈದರಾಬಾದ್ ನಲ್ಲಿ ಕಾರ್ಯಾರಂಭ ಮಾಡಿತು. ಈ ಕಂಪನಿಯು ಡಿಜಿಟಲ್ ಕ್ಷೇತ್ರದಲ್ಲಿ ಗ್ರಾಹಕ ಸಂಬಂಧ ನಿರ್ವಹಣೆ ‌ಹಾಗೂ ಸಮಸ್ಯೆಗಳ ಪರಿಹಾರ ಒದಗಿಸುತ್ತದೆ. ಸೇಲ್ಸ್ ಪೋರ್ನ್ ಪಾಲುದಾರರಾಗಿರುವ ನಮ್ಮ ಸಂಸ್ಥೆಯು ಸೇಲ್ಸ್ ಪೋರ್ನ್ ಪ್ಲಾಟ್ ಫಾರ್ಮ್ ಮತ್ತು ಸಂಬಂಧಿತ ತಂತ್ರಜ್ಞಾನಗಳಲ್ಲಿ ಪರಿಣಿತಿ ಹೊಂದಿದೆ‌. ಅಷ್ಟೇ ಅಲ್ಲದೆ ದೊಡ್ಡ ದೊಡ್ಡ ಉದ್ಯಮಗಳ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿದು ಸಮಸ್ಯೆಗೆ ಪರಿಹಾರ ಸೂಚಿಸುತ್ತದೆ. ಹೀಗೆ ಡಿಜಿಟಲ್ ಕ್ಷೇತ್ರದ ಹತ್ತು ಹಲವಾರು ವಿಭಾಗಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ಕಂಪನಿ ನಮ್ಮದಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಉದಯಕುಮಾರ್ ಚಿಂಚೋಳಿ, ಉಪಾಧ್ಯಕ್ಷರಾದ ರಾಜಾ ಭಿ.ಭೀಮಳ್ಳಿ, ಜಂಟಿ ಕಾರ್ಯದರ್ಶಿಗಳಾದ ಡಾ.ಕೈಲಾಸ ಪಾಟೀಲ್, ಆಡಳಿತ ಮಂಡಳಿ ಸದಸ್ಯರಾದ ಅರುಣಕುಮಾರ ಪಾಟೀಲ್, ಡಾ.ಮಹಾದೇವಪ್ಪ ರಾಂಪೂರೆ, ಸಾಯಿನಾಥ ಪಾಟೀಲ್, ಡಾ.ಅನಿಲಕುಮಾರ ಪಟ್ಟಣ, ಡಾ.ಕಿರಣ್ ದೇಶಮುಖ್ ,ಅನಿಲ ಕುಮಾರ್ ಮರಗೋಳ, ನಾಗಣ್ಣ ಘಂಟಿ, ಅಲ್ಪಾಲಿಯೋ ಕಂಪನಿಯ ಚೆನ್ನಯ್ಯ ಹಡಗಿಲಮಠ, ಶರಣು ಮಾಲಿಪಾಟೀಲ, ಜಗದೀಶ್, ಪುಷ್ಪ, ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯರಾದ ಡಾ.ಎಸ್.ಆರ್.ಪಾಟೀಲ್, ಉಪ ಪ್ರಾಚಾರ್ಯರಾದ ಡಾ.ಎಸ್.ಆರ್.ಹೊಟ್ಟಿ, ಡಾ.ಭಾರತಿ ಹರಸೂರ, ಡಾ.ನಾಗೇಂದ್ರ ಎಚ್., ಡಾ.ನಾಗೇಶ್ ಸಾಲಿಮಠ ಹಾಗೂ ಸಿದ್ಧರಾಮ ಸಂಗೋಳ್ಗಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News