ಕಲಬುರಗಿ | ಕಅಬಾ ಮೇಲೆ ಭಗವಾಧ್ವಜ ಹಿಡಿದಿರುವ ಮೋದಿ, ಆದಿತ್ಯನಾಥ್ ಫೋಟೋ ಎಡಿಟ್ ಮಾಡಿ ವಿಕೃತಿ : ಮತ್ತೊರ್ವ ಯುವಕನ ವಿರುದ್ಧ ಪ್ರಕರಣ ದಾಖಲು
ಯಲ್ಲಪ್ಪ
ಕಲಬುರಗಿ : ಇಸ್ಲಾಂ ಧರ್ಮದ ಪವಿತ್ರ ಸ್ಥಳವಾಗಿರುವ ಮಕ್ಕಾದ ಕಅಬಾದ ಮೇಲೆ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ ಹಾಗೂ ಭಗವಾಧ್ವಜವನ್ನು ಎಡಿಟ್ ಮಾಡಿದ ಫೊಟೋವೊಂದನ್ನು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ ಆರೋಪದ ಮೇರೆಗೆ ಮತ್ತೋರ್ವ ಯುವಕನ ವಿರುದ್ಧ ಪ್ರಕರಣ ದಾಖಲಾಗಿದೆ.
ಕಲಬುರಗಿ ನಗರದ ಯಲ್ಲಪ್ಪನ ವಿರುದ್ಧ ಸೋಮವಾರ ರಾಘವೇಂದ್ರ ನಗರ (ಆರ್.ಜಿ ನಗರ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುವಕ ಯಲ್ಲಪ್ಪ, ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕಅಬಾದ ಮೇಲೆ ಭಗವಾಧ್ವಜ ಹಿಡಿದಿರುವ ನರೇಂದ್ರ ಮೋದಿ, ಆದಿತ್ಯನಾಥ್ ಫೋಟೋವನ್ನು ಎಡಿಟ್ ಮಾಡಿ ವಿಕೃತಿ ಮೆರೆದಿದ್ದಾನೆ. ಇದನ್ನು ಗಮನಿಸಿದ ಹುಸೈನಿ ಗಾರ್ಡನ್ ಬಡಾವಣೆಯ ನಿವಾಸಿಗಳಾದ ಮುಹಮ್ಮದ್ ಯಾಸೀನ್, ಸೈಯದ್ ಜಾಫರ್, ಅಬ್ದುಲ್ ರಹಮಾನ್, ಸದಾಮ್ ಅಖಾಡಾ ಹಾಗೂ ಇಮ್ರಾನ್ ರಜವಿ ಎಂಬವರು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಎಸಗಿರುವ ಆರೋಪಿಯನ್ನು ಬಂಧಿಸಿ, ಆತನ ವಿರುದ್ಧ ಕಾನೂನು ಕ್ರಮ ಜರುಗಿಸಿ, ಯುವಕನ ಹಿಂದೆ ಇರುವ ಶಕ್ತಿಗಳನ್ನು ಪತ್ತೆ ಹಚ್ಚಬೇಕೆಂದು ದೂರು ನೀಡಿದ್ದಾರೆ.
ಅ.4 ರಂದು ಜೇವರ್ಗಿ ಪೊಲೀಸ್ ಠಾಣೆ ವ್ಯಾಪ್ತಿಯ ಯಡ್ರಾಮಿ ತಾಲ್ಲೂಕಿನ ಇಜೇರಿ ಗ್ರಾಮದ ಆನಂದ ಗುತ್ತೇದಾರ್ (22) ಇದೇ ಫೋಟೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದಕ್ಕೆ ಬಂಧಿಸಲಾಗಿತ್ತು.