×
Ad

ಕಲಬುರಗಿ | ಯಾಂತ್ರೀಕರಣ ಯೋಜನೆಯಡಿ ಸಹಾಯಧನ ಪಡೆಯಲು ಅರ್ಜಿ ಆಹ್ವಾನ

Update: 2025-06-10 19:19 IST

ಕಲಬುರಗಿ: ತೋಟಗಾರಿಕೆ ಇಲಾಖೆಯಿಂದ 2025-26ನೇ ಸಾಲಿಗೆ ಯಾಂತ್ರೀಕರಣ ಕಾರ್ಯಕ್ರಮ (ಎಸ್.ಎಮ್.ಎ.ಎಮ್.) ದಡಿ ಸಹಾಯಧನ ಪಡೆಯಲು ಜಿಲ್ಲೆಯ ಆಸಕ್ತಿಯುಳ್ಳ ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ (ಜಿ.ಪಂ.) ತೋಟಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.

ತೋಟಗಾರಿಕೆ ಯಾಂತ್ರೀಕರಣ ಕಾರ್ಯಕ್ರಮದಡಿ ದಿನಾಂಕ: 01-05-2025ರ ಮಾಹೆಯ ನಂತರ ವೈಯಕ್ತಿಕವಾಗಿ ಖರೀದಿಸುವ ಯಂತ್ರೋಪಕರಣಗಳಿಗೆ ಸಹಾಯಧನ ನೀಡಲು ತೋಟಗಾರಿಕೆ ಇಲಾಖೆ ವತಿಯಿಂದ ಇತರೆ ವರ್ಗದ ರೈತರಿಗೆ ಟ್ರ್ಯಾಕ್ಟರ್‌ ಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಉತ್ಕೃಷ್ಟ ಗುಣಮಟ್ಟದ ಉಪಕರಣಗಳಿಗೆ ಶೇ.40ರಷ್ಟು ಸಹಾಯಧನ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಸಣ್ಣ, ಅತಿ ಸಣ್ಣ ಮತ್ತು ಮಹಿಳಾ ಫಲಾನುಭವಿಗಳಿಗೆ ಶೇ.50ರಷ್ಟು ಸಹಾಯಧನ ನೀಡಲಾಗುತ್ತದೆ.

ಟ್ರ್ಯಾಕ್ಟರ್ ಖರೀದಿಸಿರುವ ಇತರೆ ವರ್ಗದ ರೈತರಿಗೆ, ಸಣ್ಣ, ಅತಿ ಸಣ್ಣ ಹಾಗೂ ಮಹಿಳಾ ರೈತರಿಗೆ ಪ್ರತಿ ಟ್ರ್ಯಾಕ್ಟರಗೆ ಶೇ.40 ರಂತೆ ಗರಿಷ್ಠ 75,000 ರೂ. ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ರೈತರಿಗೆ ಶೇ. 50 ರಷ್ಟು ಗರಿಷ್ಠ 3 ಲಕ್ಷ ರೂ. ಮೀರದಂತೆ ಸಹಾಯಧನ ನೀಡಲಾಗುತ್ತದೆ. ಎಲ್ಲಾ ರೀತಿಯ ಟ್ರ್ಯಾಕ್ಟರ್‌, ಮಿನಿ ಟ್ರ್ಯಾಕ್ಟರ್‌ ಟ್ರೇಲರ್ ಮತ್ತು ಟ್ರ್ಯಾಕ್-ಟ್ರೋಲಿ ((Track-trolly) ) ಯಂತ್ರೋಪಕರಣಗಳಿಗೆ ಸಹಾಯಧನ ನೀಡುವಾಗ ರಿಜಿಸ್ಟ್ರೇಶನ್ ((Registration) ಕಡ್ಡಾಯವಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ಆಯಾ ತಾಲೂಕಿನ ತಾಲ್ಲೂಕಾಧಿಕಾರಿಗಳಿಗೆ ಸಂಪರ್ಕಿಸಲು ಕೋರಲಾಗಿದೆ.

ಅಫಜಲಪುರ ತಾಲೂಕು: ಶಿವಯೋಗಪ್ಪ-9743518608, ಆಳಂದ ತಾಲೂಕು: ಸುರೇಂದ್ರನಾಥ-8095143035, ಚಿಂಚೋಳಿ ತಾಲೂಕು: ರಾಜಕುಮಾರ ಗೋವಿನ-9611250501. ಚಿತ್ತಾಪೂರ ತಾಲೂಕು: ಶಂಕರಗೌಡ-7760969088. ಕಲಬುರಗಿ ತಾಲೂಕು: ಬಾಬುರಾವ ಪಾಟೀಲ-9900108196. ಜೇವರ್ಗಿ ತಾಲೂಕು: ಸಮಿಯೋದ್ದಿನ-9986516251 ಹಾಗೂ ಸೇಡಂ ತಾಲೂಕು- ಈಶ್ವರ ಪವಾರ್ 9972147778 ಗಳಿಗೆ ಸಂಪರ್ಕಿಸಲು ಕೋರಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News