ಕಲಬುರಗಿ | ಕಮ್ಯುನಿಟಿ ಮೊಬಿಲೈಝರ್ ಹುದ್ದೆಯ ನೇಮಕಾತಿಗಾಗಿ ಅರ್ಜಿ ಆಹ್ವಾನ
ಕಲಬುರಗಿ : ಕಲಬುರಗಿ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಸ್ವಚ್ಛ ಭಾರತ್ ಮಿಷನ್ 2.0ರ ಅಡಿ ಐ.ಇ.ಸಿ. ಚಟುವಟಿಕೆಗಳನ್ನು ಕೈಗೊಳ್ಳಲು ಸ್ವಸಹಾಯ ಗುಂಪು (NULM SHG) ಸದಸ್ಯರನ್ನು ಕಮ್ಯುನಿಟಿ ಮೊಬಿಲೈಝರ್ (Community Mobilizer) ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಇದಕ್ಕಾಗಿ ಆಸಕ್ತಿಯುಳ್ಳ ನಲ್ಮ್-ಡೇ ಅಡಿ ನೋಂದಾಯಿತ ಎಸ್.ಹೆಚ್.ಜಿ. ಸದಸ್ಯರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಮಹಾನಗರ ಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ.
ಮೂರು ವರ್ಷಗಳವರೆಗೆ ಕಲಬುರಗಿ ಮಹಾನಗರಪಾಲಿಕೆ ವ್ಯಾಪ್ತಿಯ ಐ.ಇ.ಸಿ. ಚಟುವಟಿಕೆಗಳನ್ನು ಕೈಗೊಳ್ಳಲು ಆಸಕ್ತಿಯನ್ನು ಹೊಂದಿರುವ ನಲ್ಮ್-ಡೇ ಅಡಿಯಲ್ಲಿ ನೋಂದಾಯಿತ ಎಸ್.ಹೆಚ್.ಜಿ. (SHG) ಸದಸ್ಯರು ಕಮ್ಯುನಿಟಿ ಮೊಬಿಲೈಝರ್ (Community Mobilizer ) ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಇದರ ToR ಆಯ್ಕೆ ಪ್ರಕ್ರಿಯೆ ಮತ್ತು ಗೌರವಧನಕ್ಕೆ ಸಂಬಂಧಿಸಿದ ಇತರೆ ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಮಹಾನಗರ ಪಾಲಿಕೆಯ ಸಹಾಯಕ ಕಾರ್ಯಪಾಲಕ ಅಭಿಯಂತರರು (ಪರಿಸರ) ಇವರನ್ನು ಸಂಪರ್ಕಿಸಬೇಕು.
ಆಸಕ್ತಿಯುಳ್ಳ ನಲ್ಮ್-ಡೇ ಅಡಿಯಲ್ಲಿ ನೋಂದಾಯಿಸಿಕೊಂಡ ಆಸಕ್ತ ಎಸ್.ಹೆಚ್.ಜಿ. (SHG) ಸದಸ್ಯರು ತಮ್ಮ ಇಚ್ಛಾನುಸಾರ ನಲ್ಮ್-ಡೇ ಹಿಂಬರಹದೊಂದಿಗೆ ಕಲಬುರಗಿ ಮಹಾನಗರಪಾಲಿಕೆಯ ಸಹಾಯಕ ಕಾರ್ಯಪಾಲಕ ಅಭಿಯಂತರರು (ಪರಿಸರ) ಇವರ ಕಚೇರಿಗೆ ಭೇಟಿ ನೀಡಿ ನಿಗದಿತ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿ ಅವಶ್ಯಕ ದಾಖಲಾತಿಗಳಾದ ಗುರುತಿನ ಪುರಾವೆ, ನಲ್ಮ್-ಡೇ ಅಡಿ (ಎಸ್.ಹೆಚ್.ಜಿ.) (SHG) ನೋಂದಾಯಿಸಿಕೊಂಡಿರುವುದಕ್ಕೆ (ಎಂಪೆನಾಲ್) ದಾಖಲೆ, ವಿಳಾಸದ ಪುರಾವೆ, ಶೈಕ್ಷಣಿಕ ಅರ್ಹತೆ ದಾಖಲಾತಿಗಳು ಹಾಗೂ ನಲ್ಮ್ ಡೇ (NULM-Day) ರಿಂದ ಹಿಂಬರಹದ ನಮೂನೆಗಳನ್ನು ಲಗತ್ತಿಸಿ 2025ರ ಜೂನ್ 1ರ ಸಂಜೆ 5 ಗಂಟೆಯ ಯೊಳಗಾಗಿ ಖುದ್ದಾಗಿ ಸಂಬಂಧಪಟ್ಟ ಕಲಬುರಗಿ ಮಹಾನಗರ ಪಾಲಿಕೆಯ ಸಹಾಯಕ ಕಾರ್ಯಪಾಲಕ ಅಭಿಯಂತರರು (ಪರಿಸರ) ಇವರಿಗೆ ಅರ್ಜಿ ಸಲ್ಲಿಸಬೇಕು.
ಅಭ್ಯರ್ಥಿಗಳಿಗೆ ಈ ವಿಷಯದ ಕುರಿತು ಅವರಿಗೆ ಇರುವ ಆಸಕ್ತಿ, ಜ್ಞಾನ ಕೌಶಲ್ಯ. /ಮಾಹಿತಿಯ ಕುರಿತು ನಿರ್ಣಯಿಸಲು ಸಂದರ್ಶನವನ್ನು ಆಯೋಜಿಸಿ ಆಯ್ಕೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.