ಕಲಬುರಗಿ | ಕೇಂದ್ರ ಕಾರಾಗೃಹದ ಕೈದಿಗಳ ಮಕ್ಕಳಿಗೆ ಉಚಿತ ವಸತಿಯೊಂದಿಗೆ ಶಿಕ್ಷಣ ನೀಡಲು ಜಾಗೃತಿ ಕಾರ್ಯಕ್ರಮ
ಕಲಬುರಗಿ : ಕೇಂದ್ರ ಕಾರಾಗೃಹದಲ್ಲಿ ಸೋಕೇರ್ ಇಂಡ್ ಸಂಸ್ಥೆ ವತಿಯಿಂದ ಕೈದಿಗಳ ಮಕ್ಕಳಿಗೆ ಉಚಿತವಾಗಿ ವಸತಿಯೊಂದಿಗೆ 15 ವರ್ಷದಿಂದ ನಿರಂತರವಾಗಿ ಶಿಕ್ಷಣ ನೀಡಲಾಗುತ್ತಿದೆ. 2025-26ನೇ ಸಾಲಿನಲ್ಲಿ ಮಕ್ಕಳನ್ನು ದಾಖಲಿಸುವಂತೆ ಜಾಗೃತಿ ಮತ್ತು ಅರಿವು ಮೂಡಿಸಲಾಯಿತು.
ಸೋಕೇರ್ ಇಂಡ್ ಸಂಸ್ಥೆ ಅಧ್ಯಕ್ಷರಾದ ಪ್ರಕಾಶ ಕುಲಕರ್ಣಿ ಮಾತನಾಡಿ, ಬಂಧಿಗಳ ಮಕ್ಕಳಿಗೆ ಉಚಿತ ಹಾಗೂ ವಸತಿಯೊಂದಿಗೆ 1ನೇ ತರಗತಿಯಿಂದ 10ನೇ ತರಗತಿವರೆಗೆ ದಾಖಲಿಸಿಕೊಂಡು ಶಿಕ್ಷಣವನ್ನು ನೀಡಲಾಗುತ್ತಿದೆ. ತಾವುಗಳು ಮಕ್ಕಳನ್ನು ಈ ಸಂಸ್ಥೆಯ ಅಡಿಯಲ್ಲಿ ದಾಖಲಿಸಿ, ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿಯನ್ನು ಹಾಕಬೇಕಾಗಿ ಹೇಳಿದರು.
ಸಂಸ್ಥೆಯ ಸದಸ್ಯರಾದ ಗುರುರಾಜ ಕುಲಕರ್ಣಿ ಮಾತನಾಡಿ, ನಮ್ಮ ಜೀವನಕ್ಕೆ ಶಿಕ್ಷಣ ಬಹಳ ಮುಖ್ಯ ಅದರಲ್ಲಿ ವಿಶೇಷವಾಗಿ ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಕಲಿಸಿ ಉಜ್ವಲ ಭವಿಷ್ಯಕ್ಕೆ ಶಿಕ್ಷಣ ಅವಶ್ಯಕವಾಗಿದೆ. ತಾವುಗಳು ಈ ಸಂಸ್ಥೆಯ ಅಡಿಯಲ್ಲಿ ಮಕ್ಕಳನ್ನು ಸೇರಿಸಿ ಮುಂದಿನ ಜೀವನಕ್ಕೆ ಅಡಿಪಾಯ ಹೇಳಿದರು.
ಈ ಸಂಸ್ಥೆಯ ಮುಖ್ಯಸ್ಥರಾದ ಡಾ. ಅನಿತಾ ಆರ್. ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಸಹಾಯ ಅಧೀಕ್ಷಕರಾದ ಚನ್ನಪ್ಪ, ಜೈಲರ್‍ಗಳಾದ ಸುನಂದ ವಿ., ಸಾಗರ ಪಾಟೀಲ್, ಶ್ರೀಮಂತಗೌಡ ಪಾಟೀಲ್, ಮತ್ತು ಶಾಮ ಬಿದ್ರಿ, ಜೈಲರ್ ಈ ಕಾರ್ಯಕ್ರಮವನ್ನು ಸಂಸ್ಥೆಯ ಶಿಕ್ಷಕ ನಾಗರಾಜ ಮುಲಗೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಎಲ್ಲಾ ಅಧಿಕಾರಿ/ ಸಿಬ್ಬಂದಿಗಳು ಭಾಗವಹಿಸಿದರು.