ಕಲಬುರಗಿ | ವಿಕಸಿತ ಭಾರತ ನಿರ್ಮಾಣಕ್ಕೆ ಬಸವ ತತ್ವ ದಿಕ್ಸೂಚಿ: ಕುಲಸಚಿವ ಬಿರಾದಾರ
ಕಲಬುರಗಿ : ಜಗತ್ತಿಗೆ ಕಾಯಕವೇ ಕೈಲಾಸ, ದಾಸೋಹ, ಸಮಾನತೆ ಮತ್ತು ಭಾವೈಕ್ಯತೆ, ಭಕ್ತಿ, ಪ್ರಜಾಪ್ರಭುತ್ವದ ನಾಯಕತ್ವ, ತರ್ಕಬದ್ಧ ಚಿಂತನೆ, ನೀತಿ ಶಾಸ್ತ್ರ ಮತ್ತು ಅಹಿಂಸೆ ಬಸವೇಶ್ವರರ ಅಭಿವೃದ್ಧಿ ಮಾದರಿಯ ಪ್ರಮುಖ ತತ್ವಗಳಾಗಿವೆ. ಈ ತತ್ವಗಳನ್ನು ಅನುಸರಿಸುವುದು ವಿಕಸಿತ ಭಾರತವನ್ನು ಸಾಧಿಸಲು ಖಂಡಿತವಾಗಿಯೂ ಸಹಾಯ ಮಾಡುತ್ತದೆ ಎಂದು ಸಿಯುಕೆ ಕುಲಸಚಿವ ಪ್ರೊ.ಆರ್.ಆರ್.ಬಿರಾದಾರ್ ಅವರು ಹೇಳಿದರು.
ಆಳಂದ ತಾಲೂಕಿನ ಕಡಗಂಚಿ ಬಳಿಯಿರುವ ಕರ್ನಾಟಕ ಕೇಂದ್ರೀಯ ವಿಶ್ವ ವಿದ್ಯಾಲಯದಲ್ಲಿ ಹಮ್ಮಿಕೊಂಡ ಮಹಾತ್ಮ ಬಸವೇಶ್ವರರ 892 ನೇ ಜನ್ಮ ದಿನಾಚರಣೆಯ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಿಯುಕೆ ಬಸವ ಪೀಠದ ಸಂಯೋಜಕ ಡಾ.ಗಣಪತಿ ಬಿ ಸಿನ್ನೂರ ಅವರು "ಅನುಭವ ಮಂಟಪ ಮತ್ತು ಮಹಾಮನೆ: ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರಗಳು" ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
ಕಾರ್ಯಕ್ರಮ ಸಂಯೋಜಕ ಪ್ರೊ.ವೀರೇಶ ಕಸಬೇಗೌಡರ ಸ್ವಾಗತಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು. ಡಾ.ಶೈಲಜಾ ಕೊನೆಕ್ ಕಾರ್ಯಕ್ರಮವನ್ನು ನಿರೂಪಿಸಿದರು, ಡಾ.ಸ್ವಪ್ನಿಲ್ ಚಾಪೇಕರ್ ಮತ್ತು ಸಂಗೀತ ಮತ್ತು ಲಲಿತಕಲಾ ವಿಭಾಗದ ವಿದ್ಯಾರ್ಥಿಗಳು ವಚನಗಳು ಮತ್ತು ರಾಷ್ಟ್ರಗೀತೆಯನ್ನು ಹಾಡಿದರು.
ಈ ಸಂದರ್ಭದಲ್ಲಿ ಹಣಕಾಸು ಅಧಿಕಾರಿ ಡಿ.ರಾಮದೊರೈ ಪ್ರೊ.ಚನ್ನವೀರ ಆರ್.ಎಂ., ಪ್ರೊ.ಬಸವರಾಜ ಡೋಣೂರು, ಪ್ರೊ.ವಿಕ್ರಂ ವಿಸಾಜಿ, ಪ್ರೊ.ಜಿ.ಆರ್.ಅಂಗಡಿ, ಪ್ರೊ.ಪವಿತ್ರಾ ಆಲೂರ್, ಪ್ರೊ.ಭೋಸ್ಲೆ, ಪ್ರೊ.ಕೆ.ಪದ್ಮಶ್ರೀ, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.