ಕಲಬುರಗಿ | ನ.8ರಂದು 'ಬಾಬಾಸಾಹೇಬರ ನುಡಿಮುತ್ತುಗಳು' ಪುಸ್ತಕ ಬಿಡುಗಡೆ : ಬಿ.ಎಚ್.ನಿರಗುಡಿ
ಕಲಬುರಗಿ : ಇಲ್ಲಿನ ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಇದೇ ನ.8ರಂದು ಸಂಜೆ 5:30ಕ್ಕೆ ನಗರದ ಕಲಾಮಂಡಳದಲ್ಲಿ ಶಿಕ್ಷಕಿ, ಯುವ ಸಾಹಿತಿ ಮಮತಾ ಜಾನೆ ಅವರು ರಚಿಸಿರುವ "ಬಾಬಾ ಸಾಹೇಬರ ನುಡಿಮುತ್ತುಗಳು" ಪುಸ್ತಕ ಬಿಡುಗಡೆ ಸಮಾರಂಭ ನಡೆಯಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಬಿ.ಎಚ್.ನಿರಗುಡಿ ತಿಳಿಸಿದ್ದಾರೆ.
ಸಮಾರಂಭದಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥರಾದ ಪ್ರೊ.ಎಚ್.ಟಿ ಪೋತೆ ಅವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಪತ್ರಗಾರ ಇಲಾಖೆಯ ಉಪ ನಿರ್ದೇಶಕರಾದ ಡಾ.ವೀರಶೆಟ್ಟಿ ಗಾರಂಪಳ್ಳಿ ಪುಸ್ತಕ ಕುರಿತು ಮಾತನಾಡಲಿದ್ದಾರೆ, ಸಾಹಿತಿ ಡಾ.ಶ್ರೀಶೈಲ್ ನಾಗರಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಡಿಡಿಪಿಐ ಸೂರ್ಯಕಾಂತ್ ಮದಾನೆ ಮುಖ್ಯ ಅತಿಥಿಗಳಾಗಿ ಭಾಗಿಯಾಗಲಿದ್ದಾರೆ ಎಂದು ವಿವರಿಸಿದ್ದಾರೆ.
ಇದೇ ವೇಳೆಯಲ್ಲಿ ವೇದಿಕೆಯ ಮೇಲೆ ಲೇಖಕಿ ಮಮತಾ ಜಾನೆ ಹಾಗೂ ಪ್ರತಿಷ್ಠಾನ ಅಧ್ಯಕ್ಷ ಬಿ.ಎಚ್.ನಿರಗುಡಿ ಸಹ ಉಪಸ್ಥಿತರಿರುವರು. ಕಾರ್ಯಕ್ರಮ ಪ್ರಾರಂಭವಾಗುವುದಕ್ಕಿಂತ ಮುಂಚೆ ಜನಪದ ಕಲಾವಿದ ಸೂರ್ಯಕಾಂತ್ ಪೂಜಾರಿ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.