×
Ad

ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಅಂಬೇಡ್ಕರ್‌ ಅವರ 69ನೇ ಮಹಾಪರಿನಿರ್ವಾಣ ಕಾರ್ಯಕ್ರಮ

Update: 2025-12-06 22:38 IST

ಕಲಬುರಗಿ: ಕೇಂದ್ರ ಕಾರಾಗೃಹದಲ್ಲಿ ಅಂಬೇಡ್ಕರರವರ 69ನೇ ಮಹಾಪರಿನಿರ್ವಾಣ ಕಾರ್ಯಕ್ರಮ ಆಯೋಜಿಸಲಾಯಿತು.

ಡಾ. ಬಾಬಾಸಾಹೇಬ ಅಂಬೇಡ್ಕರ್‌ ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಸಂಸ್ಥೆಯ ಪ್ರಭಾರಿ ಮುಖ್ಯ ಅಧೀಕ್ಷಕರಾದ ಬಿ.ಸುರೇಶ್, ಇಂದು ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರು ನಮ್ಮನೆಲ್ಲ ಅಗಲಿದ ದಿನ. ಕೇವಲ ಅವರ ಶರೀರವಷ್ಟೆ ನಮ್ಮಿಂದ ದೂರವಾಗಿದೆ ಎಂದು ಹೇಳಿದೆ.  

ಸಹಾಯಕ ಅಧೀಕ್ಷಕ ಚನ್ನಪ್ಪ ಮಾತನಾಡುತ್ತಾ, “ದೇಶ ಸುತ್ತಿ ಕೋಶ ಓದು” ಎಂಬಂತೆ ಡಾ. ಬಾಬಾಸಾಹೇಬ್‌ ಅಂಬೇಡ್ಕರ್‌ ಅವರು ಈ ದೇಶಕ್ಕೆ ಸಂವಿಂಧಾನ ಎಂಬ ಅಮೂಲ್ಯ ರತ್ನ ನೀಡಿದ್ದಾರೆ ಎಂದು ಹೇಳಿದರು. 

ಈ ಕಾರ್ಯಕ್ರಮದಲ್ಲಿ ಸಹಾಯಕ ಆಡಳಿತಾಧಿಕಾರಿಗಳಾದ ಭೀಮಾಶಂಕರ್ ಡಾಂಗೆ, ಜೈಲರ್‌ಗಳಾದ ಸುನಂದ ವಿ., ಪುಂಡಲಿಕ ಟಿ.ಕೆ, ಶಾಮ ಬಿದ್ರಿ, ಕಾರಾಗೃಹದ ಎಲ್ಲಾ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News