×
Ad

ಕಲಬುರಗಿ| ಡಾ.ಅಂಬೇಡ್ಕರ್ ಪರಿನಿರ್ವಾಣ: ದಸಂಸ ವತಿಯಿಂದ ಸದಸ್ಯತ್ವ ನೋಂದಣಿ

Update: 2025-12-06 20:25 IST

ಕಲಬುರಗಿ: ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ 69ನೇ ಪರಿನಿರ್ವಾಣ ದಿನದ ನಿಮಿತ್ತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸೇಡಂ ತಾಲೂಕು ಸಮಿತಿಯ ನೇತೃತ್ವದಲ್ಲಿ ಸದಸ್ಯತ್ವದ ನೋಂದಣಿ ಕಾರ್ಯಕ್ರಮ ನಡೆಯಿತು.

ಜಿಲ್ಲಾ ಸಂಘಟನಾ ಸಂಚಾಲಕರಾದ ಮಾರುತಿ ಹುಳಗೋಳಕರ ಸದಸ್ಯತ್ವ ನೋಂದಣಿ ಮಾಡುವ ಮೂಲಕ ತಾಲೂಕಿನ ಕಾರ್ಯಕರ್ತರ ಸದಸ್ಯತ್ವ ಸಂಖ್ಯೆ ಹೆಚ್ಚಿಸಲು ತಾಲೂಕು ಸಮಿತಿಗೆ ಕರೆ ನೀಡಿದರು.

ಸಂಘಟನೆಯು ಸಾಮಾಜಿಕ, ಅರ್ಥಿಕ, ರಾಜಕೀಯ ಹಾಗೂ ಶೈಕ್ಷಣಿಕ ಕುಂದುಕೊರತೆಗಳನ್ನು ನಿವಾರಿಸಲು ಕರ್ನಾಟಕ ದಲಿತ ಸಂಘರ್ಷ ಸಮಿತಿ ನಿರಂತರ ಪ್ರಯತ್ನಿಸುತ್ತಿದೆ. ರಾಜ್ಯ ಪ್ರಧಾನ ಸಂಚಾಲಕರು ಮಾವಳ್ಳಿ ಶಂಕರ ಅವರು ಅಧ್ಯಯನ ಶಿಬಿರ, ಬುದ್ಧ ಬಸವ ಮತ್ತು ಅಂಬೇಡ್ಕರ್ ರವರ ಜಾಗೃತಿ ಮೂಡಿಸುವ ಕಾರ್ಯಕ್ರಮ ನಿರಂತರ ಮಾಡುತ್ತಾ ಬರುತ್ತಿದ್ದಾರೆ ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕರಾದ ರಾಜು ಡಿ.ಟಿ, ಸಂಘಟನಾ ಸಂಚಾಲಕ ಅಶೋಕ ಬೇಡಕಪಳ್ಳಿ, ಪ್ರವೀಣ ಕುಮಾರ್ ಮಂತ್ರಿ, ಕಾರ್ಯಕರ್ತರಾದ ವಿಠಲ್ ಭರಮಕರ, ಸುನೀಲ್‌ ಕುಮಾರ್‌ ಕೊಳ್ಳಿ, ಹಣಮಂತ ಸಾಗರ, ದೇವಿಂದ್ರ ಹೆಗಡೆ, ಮನೋಹರ ದೊಡ್ಡಮನಿ, ಸಂಜುಕುಮಾರ್‌ ಹೊಸಳ್ಳಿ, ರಾಮಣ್ಣ ಹಳ್ಳಿ, ದಶರಥ ಹೊಸಮನಿ, ಅವಿನಾಶ್ ದೇಗಲಮಡಿ, ಲೋಹಿತ್ ಛೋಟಿಗಿರಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News