Kalaburagi | ಶಾಲಾ ವಾಹನ ಢಿಕ್ಕಿಯಾಗಿ ಬಾಲಕ ಮೃತ್ಯು

Update: 2026-07-17 12:47 IST

ಕಲಬುರಗಿ: ಖಾಸಗಿ ಶಾಲಾ ವಾಹನ ಢಿಕ್ಕಿಯಾಗಿ 5 ವರ್ಷದ ಬಾಲಕನೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ನಗರದ ಅಂಬಿಕಾ ನಗರದಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.

ಮೃತ ಬಾಲಕನನ್ನು ಸೇಡಂ ತಾಲೂಕಿನ ಮಳಖೇಡ ಗ್ರಾಮದ ಸಂಬಣ್ಣ ಅವರ ಪುತ್ರ ವೇದಾಂತ (5) ಎಂದು ಗುರುತಿಸಲಾಗಿದೆ.

ಮಳಖೇಡ ಗ್ರಾಮದಿಂದ ನಗರದ ಅಜ್ಜಿಯ ಮನೆಗೆ ಬಂದಿದ್ದ ವೇದಾಂತ ರಸ್ತೆ ಬದಿಯಲ್ಲಿ ನಿಂತಿದ್ದ ವೇಳೆ ರಭಸವಾಗಿ ಬಂದ ಖಾಸಗಿ ಶಾಲಾ ವಾಹನ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಢಿಕ್ಕಿಯ ತೀವ್ರತೆಗೆ ತೀವ್ರ ರಕ್ತಸ್ರಾವಗೊಂಡ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಅಪಘಾತ ಸಂಭವಿಸಿದ ಬಳಿಕ ವಾಹನ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ಘಟನೆ ಸಂಬಂಧ ಸಂಚಾರಿ ಪೊಲೀಸ್ ಠಾಣೆ-1ರಲ್ಲಿ ಪ್ರಕರಣ ದಾಖಲಾಗಿದೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News